ತುಂಬಿದ ಕೆನ್ನೆ, ಕಟ್ಟುಮಸ್ತಾದ ತೋಳು, ಇದು ಜೂ.ಎನ್‌ಟಿಆರ್ (Jr.NTR) ಟ್ರೇಡ್‌ಮಾರ್ಕ್. ಕರಿಯರ್ ಆರಂಭಿಕ ದಿನದಲ್ಲಿ ಭರ್ತಿ 122 ಕೆಜಿ ಇದ್ದ ಜೂ.ಎನ್‌ಟಿಆರ್ ಇದೀಗ ಗುರುತೇ ಸಿಗದಷ್ಟು ಸಣ್ಣಗಾಗಿದ್ದಾರೆ. ಮೂಲಗಳ ಪ್ರಕಾರ ತಿಂಗಳೊಂದರಲ್ಲಿ ಸುಮಾರು 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಬೇರೆ ನಟರಿಗೆ ಹೋಲಿಸಿದರೆ ಜೂ.ಎನ್‌ಟಿಆರ್ ಕೊಂಚ ದಷ್ಟಪುಷ್ಟವಾಗಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವರು. ಆದರೀಗ ಏಕಾಏಕಿ ತಾರಕ್ ಸಿಕ್ಕಾಪಟ್ಟೆ ದೇಹತೂಕ ಇಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್ ನೀಡಲಿದ್ದಾರೆ ಮಲ್ಲಮ್ಮ
ಅಷ್ಟಕ್ಕೂ ಜೂ.ಎನ್‌ಟಿಆರ್ ದೇಹದಲ್ಲಿ ಇಷ್ಟೊಂದು ಬದಲಾವಣೆ ಆಗಲು ಏನು ಕಾರಣ ಎಂಬ ಅನುಮಾನ ಅವರ ಅಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರದ ಒಂದು ಶೇಡ್‌ನಲ್ಲಿ ಬರುವ ಪಾತ್ರಕ್ಕಾಗಿ ಜೂ.ಎನ್‌ಟಿಆರ್ ಹೀಗೆ ಬದಲಾಗಿದ್ದಾರೆ ಎಂಬ ಸುದ್ದಿ ಇದೆ. ಆದರೆ ಬಾಡಿಯನ್ನು ಇಷ್ಟೊಂದು ಪ್ರಯೋಗಕ್ಕೊಳಪಡಿಸಲು ಎನ್‌ಟಿಆರ್ ಯಾಕ್ ಒಪ್ಕೊಂಡ್ರು ಅನ್ನೋದು ಅಭಿಮಾನಿಗಳ ಬೇಸರಕ್ಕೆ ಕಾರಣ.
ಒಟ್ಟಿನಲ್ಲಿ ಜೂ.ಎನ್‌ಟಿಆರ್ ಸಣ್ಣಗಾಗಿರುವ ಸೀಕ್ರೇಟ್ ಏನು ಅನ್ನೋದನ್ನ ಅವರು ಹೇಳೋವರೆಗೂ ರಹಸ್ಯವಾಗಿಯೇ ಉಳಿಯಲಿದೆ.

