ಬೆಂಗಳೂರು: ಬಿಹಾರ ಚುನಾವಣೆ (Bihar Election) ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮಹತ್ವದ ಬದಲಾವಣೆ ಆಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.
ಪವರ್ ಶೇರಿಂಗ್ ಕೋಲಾಹಲದ ಮಧ್ಯೆ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಪ್ರಯಾಣಿಸಿದ್ದಾರೆ.ಇವತ್ತು ದೆಹಲಿಯಲ್ಲಿ (Delhi) ಕೆಲಸ ಮುಗಿಸಿ ನಾಳೆ ಬಿಹಾರಕ್ಕೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಎಐಸಿಸಿ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಬಿಹಾರದಲ್ಲಿ ರಣದೀಪ್ ಸುರ್ಜೇವಾಲರನ್ನೂ ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ನಾಯಿಮರಿ ಕೊಂದವಳ ಮೇಲೆ ಮತ್ತೊಂದು ಎಫ್‌ಐಆರ್ – 50 ಗ್ರಾಂ ಚಿನ್ನ, ವಜ್ರದ ಉಂಗುರ ಕದಿದ್ದ ಮನೆಕೆಲಸದಾಕೆ
ಪವರ್ ಶೇರಿಂಗ್ ಗೊಂದಲಕ್ಕೆ ತೆರೆ ಎಳೆಯಲು ಡೆಲ್ಲಿಗೆ ತೆರಳುತ್ತಿರುವ ಸಿಎಂ ಸಿದ್ದರಾಮಯ್ಯ ನವೆಂಬರ್ 15 ರಂದು ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ. ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದರೂ ಪವರ್ ಶೇರಿಂಗ್ ಬಗ್ಗೆ ಕ್ಲಾರಿಟಿ ಸಿಗುವ ಭೇಟಿ ಇದಾಗಿರಲಿದೆ. ಸಿಎಂ ಜೊತೆ ಡಿಸಿಎಂಗೂ ಹೈಕಮಾಂಡ್ ಆಹ್ವಾನ ನೀಡುತ್ತಿದ್ಯಾ ಅನ್ನೋ ಕುತೂಹಲವೂ ಮನೆಮಾಡಿದೆ.

