ಚಿತ್ರದುರ್ಗ: ಮಸೀದಿ (Mosque) ನಿರ್ಮಾಣಕ್ಕೆ ಹಿಂದೂ, ಮುಸ್ಲಿಮರ ಮಧ್ಯೆ ನಗರಸಭೆ ಅಧಿಕಾರಿಗಳು ವಿವಾದ ಸೃಷ್ಟಿಸಿರುವ ಘಟನೆ ಚಿತ್ರದುರ್ಗದ (Chitradurga) ಸಾಧೀಕ್ ನಗರದಲ್ಲಿ ನಡೆದಿದೆ. ವಿವಾದದ ಬಳಿಕ ಎರಡೂ ಧರ್ಮದ ಮುಖಂಡರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಹೌದು, ಈ ಹಿಂದೆ 2003ರಲ್ಲಿ ಎಂಎ ಸಾಧೀಕ್ ಎಂಬ ಡಿಸಿಯವರು ಕಡುಬಡ ಕೂಲಿ ಕಾರ್ಮಿಕರಿಗಾಗಿ 200 ಮನೆಗಳನ್ನು ಜಿಲ್ಲಾಡಳಿತದಿಂದ ನೀಡಿದ್ದರು. ಹೀಗಾಗಿ ಈ ಬಡಾವಣೆಯಲ್ಲಿ ಸುಮಾರು 100ಕ್ಕೂ ಅಧಿಕ ಹಿಂದೂ ಮನೆಗಳಿದ್ದು, ಮೂರು ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಚಿತ್ತಾಪುರ RSS ಪಥಸಂಚಲನ ವಿವಾದ – ಬೆಂಗಳೂರಲ್ಲಿಂದು ಶಾಂತಿ ಸಭೆ, ಇತರ ಸಂಘಟನೆಗಳಿಗಿಲ್ಲ ಆಹ್ವಾನ
ಆದರೆ 10-15 ಮುಸ್ಲಿಂ ನಿವಾಸಿಗಳಿರುವ ಬಡಾವಣೆಯಲ್ಲಿ ಒಂದು ಮಸೀದಿ ಸಹ ಇರಲಿಲ್ಲ. ಹೀಗಾಗಿ ಇಸ್ಲಾಂ ಧರ್ಮದ ಮುಖಂಡರು, ಅಲ್ಲೊಂದು ಖಾಸಗಿ ನಿವೇಶನ ಖರೀದಿಸಿ, ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಸಾಧಿಕ್ ನಗರದ ಸಮೀಪದಲ್ಲೇ ಇರುವ ಸರಸ್ವತಿಪುರಂ ಮತ್ತು ಸೂರ್ಯಪುತ್ರ ಸರ್ಕಲ್‌ನಲ್ಲಿ ಈಗಾಗಲೇ ಎರಡು ಮಸೀದಿಗಳಿವೆ. ಇದನ್ನೂ ಓದಿ: ಇಂದು ವಿಶ್ವಕಪ್ ಗೆದ್ದ ಟೀಂ ಇಂಡಿಯಾ ವನಿತೆಯರನ್ನ ಭೇಟಿ ಮಾಡಲಿದ್ದಾರೆ ಪ್ರಧಾನಿ ಮೋದಿ
ಹೀಗಾಗಿ, ಹಿಂದೂ ನಿವಾಸಿಗಳು ಈ ಕಾರ್ಯಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಗಮನಕ್ಕೂ ತಂದಿದ್ದು, ಈ ಅಕ್ರಮ ಮಸೀದಿ ನಿರ್ಮಾಣ ಕಾರ್ಯದಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ. ಕೂಡಲೇ ಮಸೀದಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ: ಅಕ್ಕ ಪಡೆ ರಚನೆ: NCC ‘C’ ಪ್ರಮಾಣ ಪತ್ರ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಇನ್ನು ಈ ಬಗ್ಗೆ ಚಿತ್ರದುರ್ಗ ನಗರಸಭೆ ಆಯುಕ್ತರಾದ ಲಕ್ಷ್ಮಿ ಅವರನ್ನು ಕೇಳಿದ್ರೆ, ಈ ಮಸೀದಿ ಕಾಮಗಾರಿಗೆ ನಗರಸಭೆ ಕೌನ್ಸಿಲ್ ನಲ್ಲಿ ಅನುಮತಿ ಸಿಕ್ಕಿದೆ. ಆದರೆ ಈ ಸಂಬಂಧ ಸಾರ್ವಜನಿಕ ಪ್ರಕಟಣೆ ಕರೆದು, ಅನುಮೋದನೆ ನೀಡಬೇಕಿತ್ತು. ಆದರೆ ನೇರವಾಗಿ ಅನುಮತಿಪತ್ರ ನೀಡಿರುವ ಅಕ್ರಮ ಕಡತದಿಂದ ತಿಳಿದುಬಂದಿದ್ದು, ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಯೊಳಗೆ ರದ್ದು, ತಿದ್ದುಪಡಿಗೆ ಅವಕಾಶ – ಶೀಘ್ರದಲ್ಲೇ ಹೊಸ ನಿಯಮ

