ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಸಲುವಾಗಿ ಅಕ್ಕ ಪಡೆಗೆ (Akka Pade) ತಂಡ ರಚಿಸಲು NCC ʼCʼ ಪ್ರಮಾಣ ಪತ್ರ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 35 ರಿಂದ 45 ವಯೋಮಿತಿಯ ಮಹಿಳಾ ಅಭ್ಯರ್ಥಿ (Women Candidate) ಆಗಿರಬೇಕು. ದೈಹಿಕ ಸಧೃಡತೆ ಮತ್ತು ಸ್ಥಳೀಯ ನಿವಾಸಿ ಆಗಿರಬೇಕು. ಅಭ್ಯರ್ಥಿಗಳು ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಶಿಫ್ಟ್‌ನಲ್ಲಿ ಕೆಲಸ ನಿರ್ವಹಿಸಲು ಬದ್ದರಾಗಿರಬೇಕು. ಇದನ್ನೂ ಓದಿ: ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಯೊಳಗೆ ರದ್ದು, ತಿದ್ದುಪಡಿಗೆ ಅವಕಾಶ – ಶೀಘ್ರದಲ್ಲೇ ಹೊಸ ನಿಯಮ
ಆಸಕ್ತರು ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್ ಮರಿಗೌಡ ರಸ್ತೆ, ಬೆಂಗಳೂರು-560029. ಇಲ್ಲಿ ಅರ್ಜಿಗಳನ್ನು ಪಡೆದುಕೊಂಡು, ನವೆಂಬರ್ 13, 2025 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಇದನ್ನೂ ಓದಿ: ಸೂರ್ಯಗೆ ಪಂದ್ಯದ ಶುಲ್ಕದ 30% ದಂಡ, 2 ಪಂದ್ಯಗಳಿಂದ ಹ್ಯಾರಿಸ್ ರೌಫ್ ಬ್ಯಾನ್!

