ಈ ಬಾರಿ ಬಿಗ್‌ಬಾಸ್‌ನಲ್ಲಿ ಅಶ್ವಿನಿ ಗೌಡ (Ashwini Gowda) ಹಾಗೂ ರಕ್ಷಿತಾ ಶೆಟ್ಟಿ ಕದನವಂತೂ ತಾರಕಕ್ಕೇರಿದೆ. ಇಬ್ಬರ ನಡುವೆ ಮಾತಿನ ಪೈಪೋಟಿ ಜೋರಾಗಿರುತ್ತೆ. ಪರಸ್ಪರ ಚಾಲೆಂಜ್‌ಗಳ ಸುರಿಮಳೆಯಾಗುತ್ತೆ. ಈ ಮಧ್ಯೆ ಬಿಗ್‌ಬಾಸ್ ಕಾರ್ಯಕ್ರಮದ ಪ್ರೋಮೋದಲ್ಲಿ ಅಶ್ವಿನಿ ಗೌಡ ಸೂಟ್‌ಕೇಸ್‌ನೊಂದಿಗೆ ಹೊರ ಹೋಗಿರುವ ದೃಶ್ಯ ರಿಲೀಸ್ ಆಗಿದೆ. ಹಾಗಾದ್ರೆ ಅಶ್ವಿನಿ ಗೌಡ ಕಾರ್ಯಕ್ರಮದಿಂದ ಹೊರನಡೆದ್ರಾ?
ಬಿಗ್‌ಬಾಸ್ (Bigg Boss Kannada 12) ಕೊಟ್ಟಿದ್ದ ಮಸಿ ಬಳಿಯುವ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಈ ಮನೆಯಲ್ಲಿ ಇರಲು ಯಾಕೆ ಅರ್ಹರಲ್ಲ ಎಂಬ ವಾದ ಮಂಡನೆ ವೇಳೆ ರಕ್ಷಿತಾ, ಅಶ್ವಿನಿ ಗೌಡಾಗೆ ಚಾಲೆಂಜ್ ಹಾಕಿದ್ದಾರೆ. ‘ನಿಮ್ಮನ್ನ ಮನೆಯಿಂದ ಕಳಿಸಿಯೇ ನಾನು ಹೋಗೋದು ಎಂದು ಹೇಳಿದ್ದಾರೆ’. ಬಳಿಕ ಅಶ್ವಿನಿ ಗೌಡ ಸೂಟ್‌ಕೇಸ್ ಹಿಡಿದು ಮನೆಯಿಂದ ಹೋಗ್ತಿರುವ ಪ್ರೋಮೋ ರಿಲೀಸ್ ಆಗಿದ್ದು, ಬಿಗ್‌ಬಾಸ್ ಮನೆಯಲ್ಲಿ ಮುಂದಿನ ಬೆಳವಣಿಗೆ ಕುರಿತು ಭಾರೀ ನಿರೀಕ್ಷೆ ಮೂಡಿದೆ. ಇದನ್ನೂ ಓದಿ: ಕನ್ನಡ ಅಭಿಮಾನಿಗಳ ಬಗ್ಗೆ ರಶ್ಮಿಕಾ ತೋರಿದ ಕಾಳಜಿ ಎಂತದ್ದು?
ಅಶ್ವಿನಿ ಗೌಡ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರ ಹೋಗುತ್ತಿರುವ ವೀಡಿಯೋ ನೋಡುತ್ತಿದ್ದರೆ ಅವರು ದಿಢೀರ್ ಎಲಿಮೆನೇಟ್ ಆದ್ರಾ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕಂದ್ರೆ ಮಿಡ್‌ವೀಕ್ ಎಲಿಮಿನೇಶನ್ ನಡೆಯುವ ಸಾಧ್ಯತೆಯೂ ಇರುತ್ತೆ. ಆದರೆ, ಇಲ್ಲಿ ಅಶ್ವಿನಿ ಗೌಡ ಅಷ್ಟು ಸುಲಭವಾಗಿ ಮನೆಯಿಂದ ಹೋಗುವ ಸ್ಪರ್ಧಿ ಅಲ್ಲ ಎಂಬ ಮಾತು ಕೇಳಿಬರುತ್ತಿದ್ದು, ಅವರನ್ನ ಸೀಕ್ರೆಟ್ ರೂಂನಲ್ಲಿ ಇರಿಸಿರಬಹುದು ಎಂಬ ಚರ್ಚೆ ಜೋರಾಗಿದೆ. ಒಟ್ಟಿನಲ್ಲಿ ಅಶ್ವಿನಿ ಗೌಡ ಯಾಕೆ ಸೂಟ್‌ಕೇಸ್ ಹಿಡಿದು ಮನೆಯಿಂದ ಹೊರಟರು ಅನ್ನೋದೆ ಸದ್ಯದ ಕುತೂಹಲ.

