ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಥಮಾ (Thama) ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಇದರ ಬೆನ್ನಲ್ಲೇ ರಶ್ಮಿಕಾ ಹಾಗೂ ದೀಕ್ಷಿತ್ ಶೆಟ್ಟಿ ನಟನೆಯ ದಿ ಗರ್ಲ್ಫ್ರೆಂಡ್ (The GirlFriend) ಸಿನಿಮಾ ಈ ವಾರ ತೆರೆಗೆ ಬರೋಕೆ ತಯಾರಾಗಿ ನಿಂತಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಕನ್ನಡ ಅಭಿಮಾನಿಗಳಿಗೆ ರಶ್ಮಿಕಾ ಸಲಹೆಯನ್ನ ನೀಡಿದ್ದಾರೆ. ಜೊತೆಗೆ ಹೊರಗಡೆ ಎಚ್ಚರಿಕೆ ವಹಿಸುವಂತೆ ಕಾಳಜಿಯ ಮಾತುಗಳನ್ನ ಆಡಿದ್ದಾರೆ. ರಶ್ಮಿಕಾ ಮಂದಣ್ಣ ಆಡಿದ ಮಾತು ಈಗ ವೈರಲ್ ಆಗಿದೆ. ನ್ಯಾಷನಲ್ ಕ್ರಶ್ ಅಭಿಮಾನಿಗಳು ಫುಲ್ ಖುಷಿಯಿಂದ ಕುಣಿದಾಡಿದ್ದಾರೆ. ಇನ್ನು ಕೆಲವರು ರಶ್ಮಿಕಾ ಸಿನಿಮಾಗಳು ಸೋಲುತ್ತಿವೆ ಹೀಗಾಗಿ ಈಗ ಕನ್ನಡಿಗರು ಹಾಗೂ ಕನ್ನಡ ಅಭಿಮಾನಿಗಳು ನೆನಪಾಗಿದ್ದಾರಾ? ಅಂತ ಕಮೆಂಟ್ಸ್ ಮಾಡ್ತಿದ್ದಾರೆ.ಇದನ್ನೂ ಓದಿ: ದಳಪತಿ ವಿಜಯ್‌ಗೆ ಡಾರ್ಲಿಂಗ್ ಪ್ರಭಾಸ್ ಎದುರಾಳಿ?
ಅಸಲಿಗೆ ಆ ವಿಡಿಯೋದಲ್ಲಿರೋದೇನು ಅಂದ್ರೆ “ಹಾಯ್ ಎಲ್ಲರೂ ಚೆನ್ನಾಗಿದ್ದೀರ.? ನಾನು ನಿಮ್ಮ (ಫ್ಯಾನ್ಸ್) ಬಗ್ಗೆ ತುಂಬಾ ಯೋಚ್ನೆ ಮಾಡ್ತಾ ಇರ್ತೀನಿ. ನೀವು ಯಾವಾಗಲೂ ನನ್ನ ಮನಸಲ್ಲಿ ಇರ್ತೀರಾ.. ಯೋಚನೆಯಲ್ಲಿ ಇರ್ತೀರಾ.. ನೀವು ಯಾವತ್ತೂ ಸಂತೋಷವಾಗಿ, ಆರೋಗ್ಯವಾಗಿರಬೇಕು. ಹೊರಗಡೆ ವೈರಲ್ ಫೀವರ್ ಇದೆ, ತುಂಬಾ ಕೇರ್‌ಫುಲ್ ಆಗಿರಿ” ಎಂದು ಅಭಿಮಾನಿಗಳಿಗೆ ರಶ್ಮಿಕಾ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ. ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ಸ್ ಜೊತೆ ತೆರೆಹಂಚಿಕೊಂಡ ರಶ್ಮಿಕಾ ಆಗಾಗ ಒಂದಲ್ಲ ಒಂದು ಕಾಂಟ್ರವರ್ಸಿಯಿಂದಲೇ ಸದ್ದು ಮಾಡ್ತಾರೆ. ಈ ಬಾರಿ ಕನ್ನಡಿಗರ ಬಗ್ಗೆ ಮಾಡಿದ ವಿಡಿಯೋಗೆ ಅಪಾರ ಮೆಚ್ಚುಗೆ ಸಿಗುತ್ತಿದೆ.ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ಭೈರಾದೇವಿ ನಿರ್ದೇಶಕ ಶ್ರೀಜೈ




