ರಾಯ್‌ಪುರ: ಗೂಡ್ಸ್ ರೈಲಿಗೆ ಪ್ರಯಾಣಿಕ ರೈಲು ಡಿಕ್ಕಿ (Passenger Train) ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ (Chhattisgarh’s Bilaspur) ಜಿಲ್ಲೆಯಲ್ಲಿ ನಡೆದಿದೆ.
ಬಿಲಾಸ್‌ಪುರ-ಕಟ್ನಿ ವಿಭಾಗದಲ್ಲಿ ಕೊರ್ಬಾ ಪ್ರಯಾಣಿಕ ರೈಲು ಲಾಲ್ ಖಾದನ್ ಪ್ರದೇಶದ ಬಳಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕೆಲವು ಬೋಗಿಗಳು ಒಂದರ ಮೇಲೆ ಹೋಗಿ ಬಿದ್ದಿದ್ದವು.
Bilaspur, Chhattisgarh: A local goods train coming from Raigarh collided with another train from behind. Details about casualties or injuries are yet to be confirmed pic.twitter.com/0zNQizPXO0
— IANS (@ians_india) November 4, 2025
ರೈಲ್ವೆ ರಕ್ಷಣಾ ತಂಡಗಳು, ಆರ್‌ಪಿಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ತುರ್ತು ವೈದ್ಯಕೀಯ ತಂಡಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ: ರಾಹುಲ್ ಗಾಂಧಿ
ಈ ಅಪಘಾತದ ಬಳಿಕ ಈ ಮಾರ್ಗವಾಗಿ ಸಂಚರಿಸಬೇಕಿದ್ದ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದರೆ ಕೆಲವನ್ನು ಬೇರೆ ಕಡೆಗೆ ತಿರುಗಿಸಲಾಗಿದೆ.

