ಪಾಟ್ನಾ: ಲಾಲು ಪ್ರಸಾದ್ ಯಾದವ್ (Lalu Prasad Yadav) ಮತ್ತು ರಾಹುಲ್ ಗಾಂಧಿ (Rahul Gandhi) ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ. ಆದರೆ ಬಿಜೆಪಿ ಒಳನುಸುಳುಕೋರರನ್ನು ಒಬ್ಬೊಬ್ಬರಾಗಿ ಗುರುತಿಸಿ ದೇಶದಿಂದ ಹೊರಹಾಕುತ್ತದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಗುಡುಗಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಮೊದಲ ಹಂತದ ಪ್ರಚಾರದ ಕೊನೆಯ ದಿನದಂದು, ಅಮಿತ್ ಶಾ ಅವರು ದರ್ಭಾಂಗಾದ ಜಲೇಯಲ್ಲಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
बिहार में CM कौन बनेगा, यह घुसपैठिए नहीं, बिहार के युवा तय करेंगे। pic.twitter.com/g4H1MMmNzW
— Amit Shah (@AmitShah) November 4, 2025
ಬಿಹಾರವು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನೇತೃತ್ವದಲ್ಲಿ 15 ವರ್ಷಗಳ ಜಂಗಲ್ ರಾಜ್ ಅನ್ನು ನೋಡಿದೆ. ಅದೇ ಮಾದರಿಯನ್ನು ಈಗ ಮತ್ತೆ ತರುವ ಯತ್ನ ನಡೆಯುತ್ತಿದೆ. ಜಂಗಲ್ ರಾಜ್ಗೆ ಮರಳುವುದನ್ನು ನಿಲ್ಲಿಸಿ ದರ್ಭಾಂಗಾವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡುವುದು ಎನ್ಡಿಎಯ ಆದ್ಯತೆ ಎಂದು ಹೇಳಿದರು. ಇದನ್ನೂ ಓದಿ: ಪರಮಾಣು ಪರೀಕ್ಷೆ ಪುನರಾರಂಭಿಸಿದ ಮೊದಲಿಗರು ನಾವಲ್ಲ: ಟ್ರಂಪ್ ಹೇಳಿಕೆಗೆ ಪಾಕ್ ತಿರುಗೇಟು

