ಚಂಡೀಗಢ: ಫರಿದಾಬಾದ್‌ನಲ್ಲಿ (Faridabad) 17 ವರ್ಷದ ಬಾಲಕಿಯನ್ನು ಹಲವಾರು ದಿನಗಳಿಂದ ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ.
ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಲೈಬ್ರರಿಯಲ್ಲಿ ಓದಲು ಬರುತ್ತಿದ್ದರು. ಗ್ರಂಥಾಲಯದ ಹೊರಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಹಿಂದೂ ದೇವತೆಗಳ ವಿರುದ್ಧ ಬಾಲಕಿಯಿಂದ ಅವಹೇಳನಕಾರಿ ಪೋಸ್ಟ್; ಪೋಷಕರು ಜೈಲಿಗೆ
ಆರೋಪಿಗೆ ಹುಡುಗಿಯ ದಿನಚರಿಯ ಬಗ್ಗೆ ತಿಳಿದಿತ್ತು. ಅವಳ ಆಗಮನಕ್ಕಾಗಿ ಮುಂಚಿತವಾಗಿ ಬಂದು ಕಾಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಹುಡುಗಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಆಕೆ ಗ್ರಂಥಾಲಯಕ್ಕೆ ಬರುವುದನ್ನೇ ಕಾದು ಕುಳಿತುಕೊಳ್ಳುತ್ತಿದ್ದ.
ಗಾಯಗೊಂಡಿರುವ ಬಾಲಕಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯನ್ನು ಗುರುತಿಸಿದ್ದಾಳೆ. ಆತ ಹಲವು ಬಾರಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಆರೋಪಿ ನನಗೆ ಗೊತ್ತು. ಆತ ಬಹಳ ಸಮಯದಿಂದ ನನಗೆ ತೊಂದರೆ ನೀಡುತ್ತಿದ್ದ ಎಂದು ಪೊಲೀಸರು ಬಳಿ ಬಾಲಕಿ ದೂರಿದ್ದಾಳೆ. ಇದನ್ನೂ ಓದಿ: ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಅಪಹರಿಸಿ ಲೈಂಗಿಕ ದೌರ್ಜನ್ಯ; ಮೂವರು ಕಾಮುಕರು ಅರೆಸ್ಟ್
ಬಾಲಕಿಯ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿಯು ಅದನ್ನು ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

