ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಅನಧಿಕೃತ ಕಟ್ಟಡಗಳ ತೆರವು (Removal Of Unauthorized Buildings) ಕಾರ್ಯಾಚರಣೆ ಶುರುವಾಗಲಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಅನಧಿಕೃತ ಕಟ್ಟಡಗಳ ತೆರವಿಗೆ ಮುಂದಾಗಿದೆ. ವಾರಕ್ಕೆ 8 ಕಟ್ಟಡಗಳ ತೆರವಿಗೆ ಪೂರ್ವ ನಗರ ಪಾಲಿಕೆ ಇಂಜಿನಿಯರ್‌ಗಳಿಗೆ ಟಾರ್ಗೆಟ್ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಆದ ಬಳಿಕ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಸದ್ದು ಜೋರಾಗಿದೆ. ಬೆಂಗಳೂರು ಪೂರ್ವನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡಲು ಬೆಂಗಳೂರು ನಗರ ಪಾಲಿಕೆಯ ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಎಂಜಿನಿಯರ್‌ಗಳ ಜೊತೆ ಸಮನ್ವಯ ಸಭೆ ಮಾಡಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯ ಟಾರ್ಗೆಟ್ ನೀಡಿದ್ದಾರೆ. ಇದನ್ನೂ ಓದಿ: ನಿರ್ಮಾಪಕ, ನಿರ್ದೇಶಕ ಸೇರಿದಾಗ ಮಾತ್ರ ಸ್ಟಾರನ್ನ ಹುಟ್ಟುಹಾಕಬಹುದು: ದರ್ಶನ್ ಹೆಸರೇಳದೇ ಉಮಾಪತಿ ಟಾಂಗ್
ಇನ್ನೂ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಿಭಾಗಗಳು, 24 ಉಪ ವಿಭಾಗಗಳು ಹಾಗೂ 50 ವಾರ್ಡ್‌ಗಳನ್ನು ರಚಿಸಲಾಗಿದೆ. ಇನ್ನೊಂದು ವಾರದೊಳಗೆ ಎಲ್ಲಾ ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ, ಹಾಗೂ ಸಹಾಯಕ ಅಭಿಯಂತರರು ತಮ್ಮ ವಿಭಾಗ, ಉಪವಿಭಾಗ ಹಾಗೂ ವಾರ್ಡ್ ಮಟ್ಟದ ಎಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕೆಂದು ನಿರ್ದೇಶನ ನೀಡಿದರು. ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು, ಪ್ರತಿ ವಾರ ವಿಭಾಗಕ್ಕೆ ಒಂದರಂತೆ 8 ವಿಭಾಗಗಳಿಂದ ಒಟ್ಟು 8 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದ ವೇಳೆ ಹೊಸ ಸಿಎಂ ನೇಮಕ: ಶ್ರೀರಾಮುಲು ಭವಿಷ್ಯ
ಒಟ್ಟಾರೆ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಟಾರ್ಗೆಟ್ ನೀಡಲಾಗಿದೆ. ಬರೀ ಪೂರ್ವ ನಗರ ಪಾಲಿಕೆ ಅಷ್ಟೇ ಅಲ್ಲದೇ ಎಲ್ಲಾ ನಗರ ಪಾಲಿಕೆಗಳಲ್ಲೂ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಶುರುವಾಗಲಿದ್ದು, ಯಾವ ರೀತಿ ಆಗಲಿದೆ ಕಾದು ನೋಡಬೇಕಿದೆ. ಇದನ್ನೂ ಓದಿ: ಸದ್ಯಕ್ಕೆ ದೆಹಲಿ ಪ್ರವಾಸವಿಲ್ಲ, ಅವಶ್ಯಕತೆ ಬಂದಾಗ ಹೋಗುತ್ತೇನೆ : ಸತೀಶ್ ಜಾರಕಿಹೊಳಿ

