ಮಂಗಳೂರು: ಕಳೆದ 50 ದಿನಗಳಿಂದ ನಾಪತ್ತೆಯಾಗಿ ಭೂಗತನಾಗಿದ್ದ ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿಗೆ (Mahesh Shetty Timarodi) ಕೊನೆಗೂ ಪ್ರತ್ಯಕ್ಷವಾಗಿದ್ದಾರೆ.
ಸೋಮವಾರ (ನ.3) ಬೆಳ್ತಂಗಡಿ ಕೋರ್ಟ್‌ಗೆ ಹಾಜರಾಗಿದ್ದು, ವಾರೆಂಟ್ ರೀಕಾಲ್ ಮಾಡಿ ತೆರಳಿದ್ದಾರೆ. ಕಳೆದ ವರ್ಷ ಉಜಿರೆಯಲ್ಲಿ (Ujire) ಸೌಜನ್ಯ ಪರವಾಗಿ ಅನಧಿಕೃತ ಬ್ಯಾನರ್ ಹಾಕಿದ್ದ ಹಿನ್ನೆಲೆಯಲ್ಲಿ ತಿಮರೋಡಿ ಸೇರಿ 6 ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರೂ ಜಾಮೀನು ಪಡೆಯದೇ ತಿರುಗಾಡುತ್ತಿದ್ದ ತಿಮರೋಡಿಗೆ ಬೆಳ್ತಂಗಡಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು. ಹೀಗಾಗಿ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರೀಕಾಲ್ ಮಾಡಿ, ತೆರಳಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ | ಮಟ್ಟಣ್ಣನವರ್, ತಿಮರೋಡಿ, ಸುಜಾತಾ ಭಟ್ ಸೇರಿ ಐವರಿಗೆ ಮತ್ತೆ ನೋಟಿಸ್
ಸೆ.18ರಂದು ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಮಾಡಿ, ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದರು. 2025ರ ಸೆ.18ರಿಂದ 2026ರ ಸೆ.17ರವರೆಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶಿಸಿದ್ದರು. ಆದರೆ ಅದಾದ ಬಳಿಕ ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಕೋರ್ಟ್ ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

