ಕರಾವಳಿಯಲ್ಲಿ ಹೋಟೆಲ್ ಬಂದ್‍ಗೆ ಬೆಂಬಲವಿಲ್ಲ- ಎಲ್ಲೆಲ್ಲಿ ಮೆಡಿಕಲ್, ಹೋಟೆಲ್ ಬಂದ್ ಇಲ್ಲಿದೆ ಪೂರ್ಣ ಮಾಹಿತಿ

Public TV
3 Min Read
BUND

ಮಂಗಳೂರು: ಕೇಂದ್ರದ ಜಿಎಸ್ ಟಿ ವಿರೋಧಿಸಿ ಹೋಟೆಲ್ ಹಾಗೂ  ಆನ್ ಲೈನ್ ಔಷಧ ಮಾರಟವನ್ನು ಖಂಡಿಸಿ ಮೆಡಿಕಲ್ ಬಂದ್‍ಗೆ ದೇಶಾದ್ಯಂತ ಕರೆ ನೀಡಿದ್ದು, ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಕೆಲವೆಡೆ ಮೆಡಿಕಲ್ ಗಳನ್ನು ಬಂದೆ ಮಾಡಿದ್ರೆ, ಇನ್ನು ಕೆಲವೆಡೆ ಹೋಟೆಲ್ ಗಳನ್ನು ಬಂದ್ ಮಾಡುವ ಮೂಲಕ ರಾಜ್ಯದ ಜನತೆ ಬಂದ್ ಗೆ ಪ್ರತಿಕ್ರಿಯಿಸಿದ್ದಾರೆ.

ಎಲ್ಲೆಲ್ಲಿ, ಯಾವುದು ಬಂದ್? ಬಂದ್ ಇಲ್ಲ?:

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜಿ ಎಸ್ ಟಿ ಕಾಯಿದೆ ವಿರೋಧಿಸಿ ದೇಶಾದ್ಯಂತ ಹೋಟೆಲ್ ಮುಷ್ಕರಕ್ಕೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ಲಭಿಸಿದೆ. ಆಸ್ಪತ್ರೆಗಳ ಮೆಡಿಕಲ್ಸ್ ಶಾಪ್ ಗಳು ಎಂದಿನಂತೆ ತೆರೆದಿದ್ದು, ರೋಗಿಗಳಿಗೆ ಸೇವೆ ಒದಗಿಸುತ್ತಿದೆ. ಹೋಟೆಲ್ ಗಳ ತವರೂರು ಆಗಿರುವ ಮಂಗಳೂರಿನ ಎಲ್ಲಾ ಹೊಟೇಲ್ ಮಾಲಕರು ಮುಂಜಾನೆಯಿಂದಲೇ ಹೊಟೇಲ್ ಗಳನ್ನು ತೆರೆದಿದ್ದು, ಹೊಟೇಲ್ ಮುಷ್ಕರಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.

vlcsnap 2017 05 30 09h58m02s24

ಆದ್ರೆ ಆನ್ ಲೈನ್ ಔಷಧ ಮಾರಟವನ್ನು ಖಂಡಿಸಿ ದೇಶಾದ್ಯಂತ ಕರೆ ನೀಡಲಾಗಿರುವ ಮೆಡಿಕಲ್ ಶಾಪ್ ಬಂದ್ ಗೆ ಮಂಗಳೂರಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 520 ಮೆಡಿಕಲ್ ಅಂಗಡಿಗಳು ಬಂದ್ ಆಗಿದ್ದು ಶಾಪ್ ಮಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ರೆ ಮೆಡ್ ಪ್ಲಸ್ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಜೌಷಧ ಮಾರಾಟಗಾರರ ಸಂಘದ ವ್ಯಾಪ್ತಿಗೆ ಒಳಪಡದ ಕಾರಣ ಮತ್ತು ಸ್ವತಃ ಆನ್ ಲೈನ್ ಜೌಷಧ ಮಾರಟ ಮಾಡೋದ್ರಿಂದ ಮೆಡ್ ಪ್ಲಸ್ ಶಾಪ್ ಗಳು ಬಂದ್ ಗೆ ಬೆಂಬಲ ನೀಡಿಲ್ಲ.

ವಿಜಯಪುರದಲ್ಲಿ ಮೆಡಿಕಲ್ ಬಂದ್ ಗೆ ಬೆಂಬಲ ಇಲ್ಲ ಎಂದಿನಂತೆ ತೆರೆದ ಔಷಧ ಅಂಗಡಿಗಳು ಜಿಲ್ಲೆಯ 800 ಮೆಡಿಕಲ್ ಸ್ಟೋರ್ ಗಳಿದ್ದು ಎಲ್ಲವೂ ಎಂದಿನಂತೆ ಕಾರ್ಯ ನಿರ್ವಹಸುತ್ತಿವೆ ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳಲ್ಲಿನ ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.

vlcsnap 2017 05 30 09h39m17s64

ತುಮಕೂರಿನಲ್ಲಿ ಆನ್ ಲೈನ್ ಔಷಧ ಮಾರಾಟವನ್ನು ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿರುವ ಮೆಡಿಕಲ್ ಶಾಪ್ ಗಳ ಒಂದು ದಿನದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಳೆದ ಮಧ್ಯ ರಾತ್ರಿಯಿಂದ ಮೆಡಿಕಲ್ ಶಾಪ್‍ಗಳು ಬಂದ್ ಆಗಿವೆ. ಜಿಲ್ಲೆಯಲ್ಲಿ 800 ಮೆಡಿಕಲ್ ಸ್ಟೋರ್ ಗಳಿದ್ದು ಎಲ್ಲವೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ಉಳಿದಂತೆ ನರ್ಸಿಂಗ್ ಹೋಂ ಹಾಗೂ ಆಸ್ಪತ್ರೆಗಳಲ್ಲಿನ ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಎಮ್ ಜಿ ರಸ್ತೆ, ಬಾರ್ ಲೈನ್, ಹನುಮಂತಪುರಗಳಲ್ಲಿ ಔಷಧಿ ಅಂಗಡಿಗಳು ಮುಚ್ಚಿದ ದೃಶ್ಯ ಸಾಮಾನ್ಯವಾಗಿದೆ.

vlcsnap 2017 05 30 09h40m03s13

ರಾಯಚೂರಿನಲ್ಲಿ ಕೂಡ ಬಂದ್‍ಗೆ ವ್ಯಾಪಾರಿಗಳು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿನ 850 ಔಷಧಿ ಅಂಗಡಿಗಳನ್ನು ಮುಚ್ಚಲಾಗಿದೆ. ನರ್ಸಿಂಗ್ ಹೋಮ್ ನಲ್ಲಿನ ಅಂಗಡಿಗಳು ಹಾಗೂ ತುರ್ತುಪರಸ್ಥಿತಿ ಹೊರತುಪಡಿಸಿ ಎಲ್ಲಾ ಔಷಧಿ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಮೆಡಿಕಲ್ ಶಾಪ್ ಗಳೆ ತುಂಬಿರುವ ನಗರದ ಡಾಕ್ಟರ್ಸ್ ಲೇನ್ ರಸ್ತೆ ಈಗ ಬಿಕೋ ಎನ್ನುತ್ತಿದೆ. ಬಂದ್ ಮಾಹಿತಿಯಿಲ್ಲದೆ ನಗರಕ್ಕೆ ಬರುವ ರೋಗಿಗಳು ಪರಾಡುವ ಸಾಧ್ಯತೆಯಿದೆ. ಜಿಎಸ್ ಟಿ ವಿರೋಧಿ ಕರೆನೀಡಿದ್ದ ಹೋಟೆಲ್ ಬಂದ್ ಗೆ ರಾಯಚೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ.

vlcsnap 2017 05 30 09h40m29s1

ಗದಗ್ ನಲ್ಲಿ ಔಷಧ ಅಂಗಡಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ ನೂರಾರು ಮೆಡಿಕಲ್‍ಗಳನ್ನ ಸಂಪೂರ್ಣವಾಗಿ ಮುಚ್ಚಲಾಗಿದೆ. ಆಸ್ಪತ್ರೆಗೆ ಹೊಂದಿಕೊಂಡಿರುವ ಔಷಧ ಅಂಗಡಿಗಳು ಮಾತ್ರ ಓಪನ್ ಇವೆ. ಅವುಗಳನ್ನ ಹೊರತು ಪಡಿಸಿ ಎಲ್ಲಾ ಔಷಧ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ನಗರದ ಟಾಂಗಾಕೂಟನಲ್ಲಿ ಅನೇಕ ಮೇಡಿಕಲ್‍ಗಳಿದ್ದು, ಮೆಡಿಕಲ್ ಬಳಿ ನಿತ್ಯ ಸಾಕಷ್ಟು ಜನ ಸೇರಿರುತ್ತಿದ್ದರು. ಇಂದು ಬಂದ್ ನಿಂದ ಬಿಕೋ ಎನ್ನುವಂತಾಗಿದೆ. ಇನ್ನು ಜಿ.ಎಸ್.ಟಿ ವಿರೋಧಿಸಿ ಹೊಟೆಲ್ ಮಾಲಿಕರು ನೀಡಿರುವ ಬಂದ್‍ಗೆ ಗದಗ ಜಿಲ್ಲೆನಲ್ಲಿ ವ್ಯಕ್ತವಾಗಿಲ್ಲ. ಎಂದಿನಂತೆ ಎಲ್ಲಾ ಹೊಟೆಲ್‍ಗಳು ಪ್ರಾರಂಭವಾಗುತ್ತಿವೆ.

vlcsnap 2017 05 30 09h39m51s124

vlcsnap 2017 05 30 09h39m36s238

vlcsnap 2017 05 30 09h41m05s95

Share This Article
Leave a Comment

Leave a Reply

Your email address will not be published. Required fields are marked *