ಮುಂಬೈ: ಫೈನಲ್ ಪಂದ್ಯದಲ್ಲಿ 5 ವಿಕೆಟ್ ಪಡೆದ ಆಲ್‌ರೌಂಡರ್ ಆಟಗಾರ್ತಿ ದೀಪ್ತಿ ಶರ್ಮಾ (Deepti Sharma) ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಬಾರಿಯ ಟೂರ್ನಿಯಲ್ಲಿ 22 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೇ 9 ಪಂದ್ಯಗಳ 7 ಇನ್ನಿಂಗ್ಸ್ ಆಡಿ 215 ರನ್ ಹೊಡೆದಿದ್ದಾರೆ.
WE ARE THE CHAMPIONS!
Every ounce of effort, every clutch moment, every tear, all of it has paid off. 💙#CWC25 #INDvSA pic.twitter.com/hhxwlStp9t
— Star Sports (@StarSportsIndia) November 2, 2025
ವಿಶ್ವಕಪ್ ಟೂರ್ನಿಯೊಂದರಲ್ಲಿ ಇಷ್ಟು ರನ್ ಮತ್ತು ಇಷ್ಟು ವಿಕೆಟ್ ಯಾರು ತೆಗೆದಿಲ್ಲ. ಈ ಕಾರಣಕ್ಕೆ ದೀಪ್ತಿ ಶರ್ಮಾ ಅವರಿಗೆ ಅರ್ಹವಾಗಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಫೈನಲ್ ಪಂದ್ಯದಲ್ಲಿ ಶರ್ಮಾ 58 ರನ್(58 ಎಸೆತ, 3 ಬೌಂಡರಿ, 1 ಸಿಕ್ಸ್) ಹೊಡೆದರೆ ಬೌಲಿಂಗ್‌ನಲ್ಲಿ 9.3 ಓವರ್ ಬೌಲ್ ಮಾಡಿ 39 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣರಾಗಿದ್ದಾರೆ.
A huge moment in the match! 🔥🫡
South African skipper, #LauraWolvaardt departs as #AmanjotKaur holds on to a pressure catch!
Is #TeamIndia edging closer to its first-ever glory? 😍#CWC25 Final 👉 #INDvSA, LIVE NOW 👉 https://t.co/gGh9yFhTix pic.twitter.com/kKR4nL8x7j
— Star Sports (@StarSportsIndia) November 2, 2025

