ಮುಂಬೈ: ಚೊಚ್ಚಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಆಗಿ ಭಾರತ ಹೊಮ್ಮಿದೆ. ಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ 52 ರನ್‌ಗಳ ಜಯ ಸಾಧಿಸಿದ ಮೊದಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. 2008ರಲ್ಲಿ ಭಾರತ ಮೊದಲ ಬಾರಿ ಫೈನಲ್ ಪ್ರವೇಶಿಸಿದಾಗ ಆಸೀಸ್ ವಿರುದ್ಧ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ವಿರೋಚಿತ ಸೋಲು ಕಂಡಿದ್ದ ಭಾರತ 3ನೇ ಬಾರಿಗೆ ಫೈನಲ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
THE HISTORIC MOMENT 🇮🇳
– WAIT FOR DECADES, INDIAN WOMENS TEAM WINNING THE WORLD CUP. 🙇 pic.twitter.com/EZc0uW1PBg
— Johns. (@CricCrazyJohns) November 2, 2025
ಪಂದ್ಯದ ಗತಿ ಬದಲಿಸಿದ 42ನೇ ಓವರ್
ಒಂದಂತದಲ್ಲಿ ಶತಕ ಬಾರಿಸಿದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ನಾಯಕಿ ಲಾರಾ ವೊಲ್ವಾರ್ಡ್ ಬಿರುಸಿನ ಆಟಕ್ಕೆ ಮುಂದಾಗುತ್ತಿದ್ದರು. ಓವರ್ ಕೊನೆಯಲ್ಲಿ ಸ್ಟ್ರೈಕ್ ಉಳಿಸಿಕೊಳ್ಳುತ್ತಾ ಪಂದ್ಯವನ್ನ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಕೊನೆಯವರೆಗೂ ಲಾರಾ ಕ್ರೀಸ್‌ನಲ್ಲಿ ನಿಂತರೇ ದಕ್ಷಿಣ ಆಫ್ರಿಕಾ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ 42ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಕೊಟ್ಟ ಟ್ವಿಸ್ಟ್ ಪಂದ್ಯ ಗತಿಯನ್ನೇ ತಲೆಕೆಳಗೆ ಮಾಡಿತು.

42ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ದೀಪ್ತಿ ಶರ್ಮಾ ಮೊದಲ ಎಸೆತದಲ್ಲೇ ಕ್ಯಾಪ್ಟನ್‌ಗೆ ಪೆವಿಲಿಯನ್ ದಾರಿ ತೋರಿದರು. ದೀಪ್ತಿ ಬೌಲಿಂಗ್‌ಗೆ ಲಾರಾ ಸಿಕ್ಸರ್ ಬಾರಿಸಲು ಯತ್ನಿಸಿದರು. ಈ ವೇಳೆ ಬೌಂಡರಿ ಬಳಿ ಅಮನ್‌ಜೋತ್ ಕೌರ್ ಸೆನ್ಸೆಷನ್ ಕ್ಯಾಚ್ ಹಿಡಿದು ದಿಗ್ಭ್ರಮೆಗೊಳಿಸಿದರು. ಮತ್ತೆ 4ನೇ ಎಸೆತದಲ್ಲಿ ಕ್ಲೋಯ್ ಟ್ರಯಾನ್ ಅವರನ್ನ ಎಲ್‌ಬಿಡಬ್ಲ್ಯೂ ಔಟ್ ಮಾಡಿದರು. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರಿತು.
46ನೇ ಓವರ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್
46ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಶ್ರೀ ಚಾರಿಣಿ 5 ಎಸೆತಗಳಲ್ಲೇ 14 ರನ್ ಬಿಟ್ಟುಕೊಟ್ಟರು. ಇದರಿಂದ ಮತ್ತೆ ಗೆಲುವು ದಕ್ಷಿಣ ಆಫ್ರಿಕಾ ವಿರುದ್ಧ ವಾಲಿತ್ತು. ಆದ್ರೆ ಕ್ರೀಸ್‌ನಲ್ಲಿದ್ದ ನಾಡಿನ್ ಡಿ ಕ್ಲರ್ಕ್ ಓವರ್‌ನ ಕೊನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ಹೋಗಿ ನಾನ್‌ಸ್ಟ್ರೈಕ್‌ನಲ್ಲಿದ್ದ ಅಯಬೊಂಗಾ ಖಾಕಾ ಅವರನ್ನ ರನೌಟ್ ಮಾಡಿಸಿದ್ರು.

ಮತ್ತೆ 47ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಬೌಲಿಂಗ್‌ಗೆ ಬಂದರು. ಇತ್ತ ಕ್ರೀಸ್‌ನಲ್ಲಿದ್ದ ನಾಡಿನ್ ಡಿ ಕ್ಲರ್ಕ್ ಮೊದಲ ಎರಡು ಎಸೆತಗಳನ್ನ ಡಾಟ್ ಮಾಡಿಕೊಂಡರು. 3ನೇ ಎಸೆತದಲ್ಲಿ ಬೌಂಡರಿಗಟ್ಟುವ ಪ್ರಯತ್ನ ಮಾಡಿದರು. ಆದ್ರೆ ಕೌರ್ ಡ್ರೈವ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ನಾಯಕಿ ಹರ್ಮನ್ ಪ್ರೀತ್ ಕೌರ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಹರಿಣಿಯರನ್ನು ಆಲೌಟ್ ಮಾಡಿದರು. ಇದರೊಂದಿಗೆ ಭಾರತ ಮಹಿಳಾ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು.

