ಶ್ರೀಹರಿಕೋಟಾ: ಭಾರತದ (India) ಅತ್ಯಂತ ಭಾರದ ಬಾಹುಬಲಿ ರಾಕೆಟ್ ಎಂದೇ ಪ್ರಸಿದ್ಧಿ ಪಡೆದಿರುವ ಜಿಎಸ್‌ಎಲ್‌ವಿ ಮಾರ್ಕ್ 3 (LVM3) ಸಿಎಂಎಸ್ 03 (ಜಿಎಸ್‌ಎಟಿ-7ಆರ್) ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ (Sriharikota) ಉಡ್ಡಯನ ಕೇಂದ್ರದಿಂದ ಭಾನುವಾರ ಸಂಜೆ 5:26ಕ್ಕೆ 4,410 ಕೆ.ಜಿ. ತೂಕದ ಉಪಗ್ರಹವನ್ನು ಹೊತ್ತುಕೊಂಡು ʼಎಲ್‌ವಿಎಂ–ಎಂ5′ ರಾಕೆಟ್ ನಭಕ್ಕೆ ಹಾರಿತು.
ಈ ಉಪಗ್ರಹವನ್ನು ಇಸ್ರೋ ಭಾರತೀಯ ನೌಕಾಪಡೆಗಾಗಿ (Indian Navy) ವಿಶೇಷವಾಗಿ ಅಭಿವೃದ್ಧಿಪಡಿಸಿದ್ದು, ಬಹು-ಬ್ಯಾಂಡ್ ಮಿಲಿಟರಿ ಸಂವಹನ ಉಪಗ್ರಹ ಇದಾಗಿದೆ. ಭಾರತದ ನೆಲದಿಂದ ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್‌ಗೆ ಇಷ್ಟು ಭಾರವಾದ ಉಪಗ್ರಹವನ್ನು ಉಡಾಯಿಸುತ್ತಿರುವುದು ಇದೇ ಮೊದಲು. ಇದನ್ನೂ ಓದಿ: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ-ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ: ಬಿಹಾರ ರ‍್ಯಾಲಿಯಲ್ಲಿ ಮೋದಿ ಅಬ್ಬರದ ಭಾಷಣ
Kudos Team #ISRO!
India’s #Bahubali scales the skies, with the successful launch of #LVM3M5 Mission!
“Bahubali” as it is being popularly referred, LVM3-M5 rocket is carrying the CMS-03 communication satellite, the heaviest ever to be launched from the Indian soil into a… pic.twitter.com/ccyIPUxpIX
— Dr Jitendra Singh (@DrJitendraSingh) November 2, 2025
ಮಲ್ಟಿ-ಬ್ಯಾಂಡ್ ಸಂವಹನ ಉಪಗ್ರಹವು ಸಿಎಂಎಸ್ 03 ಭಾರತೀಯ ಮುಖ್ಯ ಭೂಭಾಗ ಸೇರಿದಂತೆ ವಿಶಾಲ ಸಮುದ್ರ ಪ್ರದೇಶಕ್ಕೆ ಸೇವೆಗಳನ್ನು ಒದಗಿಸಲಿದೆ. ಈ ಉಪಗ್ರಹ ಸಿ, ಎಕ್ಸ್ಟೆಂಡೆಡ್ ಸಿ, ಕ್ಯೂ ಬ್ಯಾಂಡ್‌ಗಳಲ್ಲಿ ವಾಯ್ಸ್, ಡೇಟಾ ಮತ್ತು ವಿಡಿಯೋ ಲಿಂಕ್‌ಗಳಿಗೆ ಟ್ರಾನ್ಸ್ಪಾಂಡರ್ ಸೌಲಭ್ಯಗಳನ್ನು ಒದಗಿಸುತ್ತದೆ.
ಇದು ದೂರದ ಪ್ರದೇಶಗಳಲ್ಲಿ ನೌಕಾಪಡೆಯ ಡಿಜಿಟಲ್ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಅಷ್ಟೇ ಅಲ್ಲ, ಕಾರ್ಯತಂತ್ರದ ಅನ್ವಯಿಕೆಗಳನ್ನು ಬಲಪಡಿಸುತ್ತದೆ. ಈ ಉಪಗ್ರಹವು 2013 ರಲ್ಲಿ ಉಡಾವಣೆಯಾದ ಜಿಸ್ಯಾಟ್ -7 ರುಕ್ಮಿಣಿಯ ಉತ್ತರಾಧಿಕಾರಿಯಾಗಿದೆ.
ಉಪಗ್ರಹವು ನಿರ್ಣಾಯಕ ಸಮುದ್ರ ಪ್ರದೇಶದಲ್ಲಿ ನೌಕಾಪಡೆಯ ಸಂವಹನ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇಸ್ರೋ ಹೇಳಿದೆ.
ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ-03) 15 ಮಹಡಿಯ ಕಟ್ಟಡದಷ್ಟು ಎತ್ತರ (43.5 ಮೀಟರ್) ಇದ್ದು, 4 ಸಾವಿರ ಕೆಜಿಯಷ್ಟು ಭಾರದ ಸಾಧನ ಒತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಈ ರಾಕೆಟ್ ಅನ್ನು ʻಬಾಹುಬಲಿʼ (Bahubali Rocket) ಎಂದು ಕರೆಯಲಾಗುತ್ತದೆ.
Countdown Commences!
Final preparations complete and the countdown for #LVM3M5 has officially begun at SDSC-SHAR.
All systems are GO as we move closer to liftoff! ✨
For more Information Visithttps://t.co/yfpU5OTEc5 pic.twitter.com/6pPYS5rl9d
— ISRO (@isro) November 1, 2025

