ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ (Rakshita Shetty) ಕಿತ್ತಾಟ ಹೊಸದೇನಲ್ಲ. ಆದರೀಗ ಈ ಕಿತ್ತಾಟ ಪೀಕ್‌ಗೆ ತಲುಪಿದ್ದು ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ಪ್ರತಿಸ್ಪರ್ಧಿ ರಕ್ಷಿತಾ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಜಗಳ ಮಾಡುವ ವೇಳೆ ಕಲಾವಿದರಿಗೆ ಅವಮಾನ ಮಾಡಿದ್ರು. ನಾಲ್ಕೈದು ಬಾರಿ ಚಪ್ಪಲಿ ತೋರಿಸಿ ಮಾತನಾಡಿದ್ರು ಎಂದೆಲ್ಲಾ ಆರೋಪಿಸಿದ್ದಾರೆ. ಈ ವಿಚಾರವಾಗಿ ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆ ನಡೆದಿದ್ದು ಆಲ್‌ಮೋಸ್ಟ್ ಸಮಸ್ಯೆ ಇತ್ಯರ್ಥವಾಗಿದೆ. ನಿಜಾಂಶ ಏನು ಅನ್ನೋದನ್ನ ಕಿಚ್ಚ ಸುದೀಪ್ (Kichcha Sudeep) ಬಯಲು ಮಾಡಿದ್ದಾರೆ.
ಬಿಗ್‌ಬಾಸ್‌ನಲ್ಲಿ ಎರಡು ಗುಂಪಾಗಿದ್ದು ಅಶ್ವಿನಿ, ರಕ್ಷಿತಾ, ರಿಷಾ ಹಾಗೂ ಸುಧಿ ಒಂದು ಗುಂಪಿನಲ್ಲಿದ್ರೆ ಇನ್ನೊಂದು ಗುಂಪಿನಲ್ಲಿ ರಕ್ಷಿತಾ ಏಕಾಂಗಿ ನಿಂತಿದ್ದಾರೆ. ರಕ್ಷಿತಾಗೆ ಆಗಾಗ ಗಿಲ್ಲಿ ಹಾಗೂ ಕಾವ್ಯ ಬೆಂಬಲವೂ ಸಿಗುತ್ತೆ. ಇದೀಗ ವಾರದ ಪಂಚಾಯ್ತಿಯಲ್ಲಿ ಕಿಚ್ಚನಿಂದ ತಪ್ಪು ಒಪ್ಪುಗಳ ಲೆಕ್ಕಾಚಾರ ಭರ್ಜರಿಯಾಗಿ ಚರ್ಚೆಯಾಗಿದೆ. ಕಲಾವಿದರಿಗೆ ರಕ್ಷಿತಾ ಅಸಲಿಯಾಗಿ ಅವಮಾನ ಮಾಡಿದ್ರಾ? ಅಸಲಿಯಾಗಿ ಚಪ್ಪಲಿ ತೋರಿಸಿದ್ದು ನಿಜವಾ..? ಎಂಬೆಲ್ಲಾ ಅಂಶಗಳನ್ನ ಕಿಚ್ಚ ಸಹಸ್ಪರ್ಧಿಗಳಿಂದಲೇ ಬಾಯ್ಬಿಡಿಸಿದ್ದಾರೆ.
ರಕ್ಷಿತಾ ಶೆಟ್ಟಿ ಜೊತೆ ಅಶ್ವಿನಿ ಗೌಡ ಜಟಾಪಟಿ ಹೊಸದೇನಲ್ಲ. ಆದರೆ ಇದೀಗ ಅಶ್ವಿನಿಗೆ ರಾಶಿಕಾ ಹಾಗೂ ರಿಷಾ ಜೊತೆಯಾಗಿದ್ದಾರೆ. ಅಡುಗೆ ಮಾಡೋಕೆ ಹೆಲ್ಪ್ ಮಾಡೋ ವಿಚಾರದಲ್ಲಿ ರಾಶಿಕಾ ಜೊತೆ ರಕ್ಷಿತಾ ಭಾರೀ ಮಾತುಕತೆ ನಡೆದಿತ್ತು. ಈ ವೇಳೆ ಅಶ್ವಿನಿಯೂ ಜೊತೆಯಾಗಿ ರಕ್ಷಿತಾ ಮೇಲೆ ಮಾತಿನ ದಾಳಿ ಮಾಡುತ್ತಾರೆ. ರಕ್ಷಿತಾ ಕೂಡ ಪ್ರತಿದಾಳಿ ಮಾಡುತ್ತಾರೆ. ಈ ಜಗಳದ ಅಂತಿಮ ತೀರ್ಮಾನವನ್ನ ಕಿಚ್ಚ ಸುದೀಪ್ ಶನಿವಾರ ಬಗೆಹರಿಸಿದ್ದಾರೆ. ವೀಕೆಂಡ್‌ನಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿ ಎಲ್ಲರ ಬಂಡವಾಳ ಬಯಲಾಗಿದೆ.
ಈ ನಡುವೆ ರಕ್ಷಿತಾ ಫೇಕ್ ಎಂದು ಅಶ್ವಿನಿ, ರಾಶಿಕಾ, ರಿಷಾ ಹಾಗೂ ಸುಧಿ ಹೇಳುತ್ತಿದ್ದಾರೆ. ಉಳಿದವರು ರಕ್ಷಿತಾ ಇರುವುದೇ ಹಾಗೆ ಎಂದು ಒಪ್ಪಿಕೊಂಡಿದ್ದಾರೆ. ಒಟ್ನಲ್ಲಿ ಈ ಸೀಸನ್‌ನ ಬಿಗ್‌ಬಾಸ್‌ನಲ್ಲಿ ರಕ್ಷಿತಾ ಹಾಗೂ ಅಶ್ವಿನಿ ಗೌಡ ವಾಗ್ಯುದ್ಧ ಜೋರಾಗಿದೆ.




