ಸೋಮವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳ ಮೇಲೆ ಆರೋಪ ನಿಗದಿಯಾಗಲಿದ್ದು ಬೆಂಗಳೂರಿನ ಸಿಸಿಹೆಚ್ ನ್ಯಾಯಾಲಯಕ್ಕೆ ಡಿಗ್ಯಾಂಗ್ ಹಾಜರಾಗಲಿದೆ.
ಆರೋಪ ನಿಗದಿಯ ಬಳಿಕ ಬಳಿಕ ಟ್ರಯಲ್‌ಗೂ ದಿನಾಂಕ ಫಿಕ್ಸ್ ಆಗಲಿದೆ. ಹೀಗಾಗಿ ನಾಳೆ ದರ್ಶನ್‌ಗೆ (Darshan) ಮಹತ್ವದ ದಿನ. ಹೀಗೆ ದರ್ಶನ್ ಕಾನೂನು ಹೋರಾಟಕ್ಕೆ ಸಜ್ಜಾಗಬೇಕಿರುವ ಈ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi ) ಇನ್‌ಸ್ಟಾದಲ್ಲಿ ಮಹತ್ವದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಸಂಕಷ್ಟ ಪರಿಹಾರಕ್ಕಾಗಿ ಸದಾ ಅಸ್ಸಾಂನಲ್ಲಿರುವ (Assam) ಕಾಮಾಕ್ಯ ದೇವಾಲಯಕ್ಕೆ (Kamakhya Temple) ತೆರಳುವ ವಿಜಯಲಕ್ಷ್ಮಿ ಈ ಸಂದರ್ಭದಲ್ಲೂ ದೇವರನ್ನೇ ನಂಬಿರೋದಾಗಿ ಪರೋಕ್ಷವಾಗಿ ಬಿಂಬಿಸಲು ಹೊರಟಂತಿದೆ. ಇದನ್ನೂ ಓದಿ: ಉಗಾಂಡ ಜಿಟೊ ಕಿಡ್ಸ್ ಜೊತೆ ಕುಣಿದ ಕನ್ನಡದ ಸ್ಟಾರ್ಸ್
ಕಾಮಾಕ್ಯ ದೇವಿಯ ದೇವಸ್ಥಾನದಲ್ಲಿ ದೇವಿಗೆ ಪ್ರಿಯ ಕಮಲದ ಹೂ ಹಿಡಿದ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ, ನಮಗೆ ಕಾಣದೇ ಇರುವುದು ಬಹಳಷ್ಟಿದೆ, ಆದ್ದರಿಂದ ಯಾವಾಗಲೂ ರಕ್ಷಣೆಗಾಗಿ ಪ್ರಾರ್ಥಿಸಿ ಎಂಬ ಸಂದೇಶದೊಂದಿಗೆ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ಹಿಂದೆ ದರ್ಶನ್‌ಗೆ ಜಾಮೀನು (Bail) ಕೊಡಿಸಲು ವಿಜಯಲಕ್ಷ್ಮಿ ಕಾನೂನು ಹೋರಾಟದ ಜೊತೆ ದೇವರಿಗೆ ಹರಕೆ ಹೊತ್ತಿದ್ದರು. ಪೂಜೆ ಪುನಸ್ಕಾರ ಸಲ್ಲಿಸಿದ್ದರು. ಕಾಮಾಕ್ಯ ದೇವಿ ದರ್ಶನ ಮಾಡಿದ್ದರು. ಇದೀಗ ದರ್ಶನ್ ಪ್ರಕರಣದಲ್ಲಿ ಮಹತ್ವದ ಘಟ್ಟ ತಲುಪಿರುವ ಈ ಸಂದರ್ಭದಲ್ಲೂ ವಿಜಯಲಕ್ಷ್ಮಿ ಕಾಮಾಕ್ಯ ದೇವಿಯ ಜಪ ಮಾಡಿದ್ದಾರೆ.

