– ಕೈ ನಾಯಕರ ದೆಹಲಿ ಭೇಟಿ ಮುಂದುವರಿಕೆ
– ನಾಳೆ ಸತೀಶ್ ಜಾರಕಿಹೊಳಿ ದೆಹಲಿ ಪ್ರಯಾಣ
ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಪವರ್ ಫೈಟ್ ಕುರಿತ ಹೇಳಿಕೆ ಕೊಡುತ್ತಿರುವವರಿಗೆ ಡಿಸಿಎಂ ಡಿಕೆಶಿ (DK Shivakumar), ಎರಡನೇ ಬಾರಿ ವಾರ್ನಿಂಗ್ ಸಂದೇಶ ಕೊಟ್ಟಿದ್ದಾರೆ. ಆದ್ರೆ ಡಿಕೆಶಿ ಅವರ ಈ ಸಂದೇಶವೂ ಕ್ರಾಂತಿ ಹಾಗೂ ಕುರ್ಚಿ ಒಪ್ಪಂದ ಬಗ್ಗೆ ಮಹತ್ವದ ಸುಳಿವು ಕೊಟ್ಟ ಹಾಗಿದೆ. ಈ ನಡುವೆ ಸತೀಶ್ ಜಾರಕಿಹೊಳಿ (Satish Jarkiholi) ನಾಳೆ ದೆಹಲಿಗೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕಳೆದ ಕೆಲ ದಿನಗಳಿಂದ ಸಚಿವರು, ಶಾಸಕರು ಹಲವು ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಪಕ್ಷದ ನಾಯಕತ್ವ ಬಗ್ಗೆ ಹೇಳಿಕೆ ಕೊಡುತ್ತಿರುವವರಿಗೆ ಡಿಸಿಎಂ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಸೋಮವಾರ ಸಂಘ ಪರಿವಾರ, ಬಿಜೆಪಿ ನಾಯಕರ ಬೈಠಕ್
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, ನಾಯಕತ್ವ ಬದಲಾವಣೆ ವಿಚಾರವಾಗಿ ಯಾರು ದಣಿವಾಗೋದು ಬೇಡ. ಕ್ರಾಂತಿ ಬಗ್ಗೆ ತಾವು ಹಾಗೂ ಸಿಎಂ ಮಾತಾಡಿದರಷ್ಟೇ ಅಧಿಕೃತ. ಅದಕ್ಕಷ್ಟೇ ಬೆಲೆ. ನಾವಿಬ್ರು ಏನು ಮಾತಾಡಿಕೊಂಡಿದ್ದೇವೆಯೋ ಅದರಂತೆ ನಡೆದುಕೊಳ್ತೇವೆ ಅಂತ ಡಿಕೆಶಿ ಗುಡುಗಿದ್ದಾರೆ. ಡಿಕೆಶಿ ಅವರ ಈ ಹೇಳಿಕೆ ಈಗ ಸದ್ದು ಮಾಡುತ್ತಿದೆ. ಹೇಳಿಕೆ ವೀರರಿಗೆ ವಾರ್ನ್ ಮಾಡಲು ಹೋಗಿ ಡಿಕೆಶಿ ಅಧಿಕಾರ ಒಪ್ಪಂದದ ಬಗ್ಗೆ ಮಹತ್ವದ ಸುಳಿವು ಬಿಟ್ಕೊಟ್ರಾ ಅನ್ನೋ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದಿಂದ ಪಾಕಿಸ್ತಾನ-ಕಾಂಗ್ರೆಸ್ ಎರಡೂ ಚೇತರಿಸಿಕೊಂಡಿಲ್ಲ: ಬಿಹಾರ ರ‍್ಯಾಲಿಯಲ್ಲಿ ಮೋದಿ ಅಬ್ಬರದ ಭಾಷಣ
ಈ ನಡುವೆ ಕಾಂಗ್ರೆಸ್‌ನಲ್ಲಿ ಬೆಳವಣಿಗೆ ಚುರುಕು ಪಡೆದುಕೊಂಡಿದೆ. ನಾಯಕರ ದೆಹಲಿ ಭೇಟಿ ಪರ್ವ ಮುಂದುವರೆದಿದೆ. ಡಿಕೆಶಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರೂ ದೆಹಲಿ ಫ್ಲೈಟ್ ಹತ್ತುತ್ತಿದ್ದಾರೆ. ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿರೋ ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ, ಪಕ್ಷದ ವಿದ್ಯಮಾನಗಳ ಕುರಿತು ಸತೀಶ್ ಜಾರಕಿಹೊಳಿ ಖರ್ಗೆಯವರ ಜೊತೆ ಚರ್ಚೆ ಮಾಡಲಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ತಮ್ಮೊಂದಿಗೆ ಕೆಲ ಆಪ್ತ ಶಾಸಕರು, ಮಾಜಿ ಶಾಸಕರನ್ನೂ ಕರೆದೊಯ್ಯುತ್ತಿರೋದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಚೇನಂಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿಎಂ ಘೋಷಣೆ

ಇನ್ನು ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಡಿಸಿಎಂ ಡಿಕೆಶಿ, ಅವರು ಅವರ ಕೆಲಸಕ್ಕೆ ಹೋಗುತ್ತಿದ್ದಾರೆ. ಇದೇ 5, 6ಕ್ಕೆ ನಾನೂ ಬಿಹಾರ ಹೋಗುತ್ತಿದ್ದೇನೆ. ಸೆಂಟ್ರಲ್ ಮಿನಿಸ್ಟರ್ ಸಭೆ ಕರೆದಿದ್ದಾರೆ. ಇನ್ನೊಂದಿನ ಕಾವೇರಿ ಕೇಸ್ ಇದೆ, ಮತ್ತೊಂದಿನ ನನ್ನದೊಂದು ಬುಕ್ ರಿಲೀಸ್ ಕಾರ್ಯಕ್ರಮ ಇದೆ. ದೆಹಲಿಗೆ ಹೋದ್ರೆ ನಾವು ರಾಜಕೀಯಕ್ಕಾಗಿಯೇ ಹೋಗುತ್ತಿದ್ದೇನೆ ಅಂತ ಯಾಕೆ ಅಂದುಕೊಳ್ಳುತ್ತೀರಿ? ಸತೀಶ್ ಅವರು ಹೋಗೋದಾದರೆ ಅವರು ಹೋಗ್ಲಿ ಬಿಡಿ ಎಂದರು. ಇನ್ನು ಪ್ರಿಯಾಂಕ್ ಖರ್ಗೆ ಕೂಡಾ ಇದರ ಬಗ್ಗೆ ಮಾತಾಡಿದ್ದು, ನಮ್ಮ ನಾಯಕರು ಭೇಟಿ ಕೊಡ್ತಿರಬಹುದು. ದೆಹಲಿಗೆ ಹೋದರೆ ಹೈಕಮಾಂಡ್ ಭೇಟಿ ಮಾಡ್ತಾರೆ. ಅದರಲ್ಲಿ ಏನೂ ಮರ್ಮ ಇಲ್ಲ. ದೆಹಲಿ ಭೇಟಿಯಲ್ಲಿ ವಿಶೇಷ ಇಲ್ಲ. ನಾನೂ ನಾಡಿದ್ದು ಹೋಗ್ತೇನೆ, ಟೆಕ್ ಸಮ್ಮಿಟ್ ಸಂಬಂಧ ಚರ್ಚೆ ಮಾಡಲು ಹೋಗ್ತೇನೆ. ಆದ್ರೆ ಯಾವಾಗ ಏನಾಗಬೇಕೋ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು. ಇದನ್ನೂ ಓದಿ: ಕೆ-ಸೆಟ್ ಪರೀಕ್ಷೆ | ಬಳ್ಳಾರಿಯಲ್ಲಿ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ರಾಮಲಿಂಗಾರೆಡ್ಡಿ ಫಾರ್ ಸಿಎಂ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಎಕ್ಸ್ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಭದ್ರವಾಗಿದೆ. ಪ್ರಸ್ತುತ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇರುವುದಿಲ್ಲ ಮತ್ತು ನಾನು ಅದರ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ಈ ರೀತಿಯ ಆಧಾರರಹಿತ ಪ್ರಚಾರವನ್ನು ತಕ್ಷಣವೇ ನಿಲ್ಲಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 40 ಕೆ.ವಿ ವಿದ್ಯುತ್ ಲೈನ್ ಕಾಮಗಾರಿಯಿಂದ ಕೃಷಿ ನಾಶ – ಅಶ್ವತ್ಥಪುರದಲ್ಲಿ ರೈತರಿಂದ ಪ್ರತಿಭಟನಾ ಜಾಥಾ, ಸಭೆ
ಸದ್ಯ ನವೆಂಬರ್ ತಿಂಗಳಾಗಿರೋದ್ರಿಂದ ಕಾಂಗ್ರೆಸ್‌ನಲ್ಲಿ ಕುರ್ಚಿ ಚರ್ಚೆ, ನಾಯಕರ ಚಲನವಲನ ಕಾವು ಪಡೆದುಕೊಂಡಿದೆ. ದೆಹಲಿ ಭೇಟಿಗಳೂ ಹೆಚ್ಚಾಗುತ್ತಿವೆ. ಇದನ್ನೂ ಓದಿ: ನಿಜಕ್ಕೂ ಇವತ್ತು ವೀರಪ್ಪನ್ ಇರಬೇಕಿತ್ತು, ಕಾಡು ಸಮೃದ್ಧವಾಗಿರುತ್ತಿತ್ತು: ಸರ್ಕಾರದ ವಿರುದ್ಧ ರೈತರ ಆಕ್ರೋಶ

