– 15 ಮಹಡಿ ಕಟ್ಟಡದಷ್ಟು ಉದ್ದ, 150 ಏಷ್ಯನ್ ಆನೆಗಳಿಗೆ ಸಮನಾದಷ್ಟು ತೂಕ
ಅಮರಾವತಿ: ಭಾರತೀಯ ನೌಕಾಪಡೆಗೆ ಸಹಾಯವಾಗುವ ಸಂವಹನ ಉಪಗ್ರಹ ʻCMS-03ʼ ಅನ್ನು ಭಾನುವಾರ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಜ್ಜಾಗಿದೆ.
Countdown Commences!
Final preparations complete and the countdown for #LVM3M5 has officially begun at SDSC-SHAR.
All systems are GO as we move closer to liftoff! ✨
For more Information Visithttps://t.co/yfpU5OTEc5 pic.twitter.com/6pPYS5rl9d
— ISRO (@isro) November 1, 2025
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಭಾನುವಾರ ಸಂಜೆ 5:26ಕ್ಕೆ ಉಡಾವಣೆ ಆಗಲಿದ್ದು, ಇದು ಭಾರತದ ಮಿಲಿಟರಿ ವಲಯದ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಲಿದೆ. ʻಎಲ್‌ವಿಎಂ-ಎಂ5ʼ ರಾಕೆಟ್ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ. ಉಪಗ್ರಹವು 4,410 ಕೆಜಿ ತೂಕ ಹೊಂದಿದ್ದು, ದೇಶದ ಬಾಹ್ಯಾಕಾಶಕೇಂದ್ರದಿಂದ ಇದೇ ಮೊದಲ ಬಾರಿಗೆ ಉಡಾವಣೆ ಆಗುತ್ತಿರುವ ಭಾರೀ ತೂಕದ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿದೆ.
ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ-03) 15 ಮಹಡಿಯ ಕಟ್ಟಡದಷ್ಟು ಎತ್ತರ (43.5 ಮೀಟರ್) ಇದ್ದು, 4 ಸಾವಿರ ಕೆಜಿಯಷ್ಟು ಭಾರದ ಸಾಧನ ಒತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಈ ರಾಕೆಟ್ ಅನ್ನು ʻಬಾಹುಬಲಿʼ (Bahubali Rocket) ಎಂದು ಕರೆಯಲಾಗುತ್ತದೆ.
Meet #LVM3M5, India’s operational heavy-lift launcher. Height: 43.5 m | Lift Off Mass: 642 t | Stages: 2×S200 Solid, L110 Liquid, C25 Cryogenic.
LIFT-OFF at
🗓️ 2 Nov 2025 (Sunday) 🕔5:26 PM IST
For more Information Visithttps://t.co/hNtrA0eQXK pic.twitter.com/O2jIZrNOyL
— ISRO (@isro) October 30, 2025
ಭಾರತೀಯ ನೌಕಾ ಸೇನೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಂಡಿರುವ ಈ ಉಪಗ್ರಹವನ್ನ ಜಿಸ್ಯಾಟ್-7ಆರ್ ಎಂದೂ ಕರೆಯಲಾಗಿದೆ. ಇದು ಯುದ್ಧ ನೌಕೆಗಳು, ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಭೂಮಿಯಲ್ಲಿರುವ ಕಮಾಂಡ್ ಕೇಂದ್ರಗಳ ನಡುವಿನ ಸಂವಹನವನ್ನು (Military Communication Mission) ಸುಧಾರಿಸಲಿದೆ.
ಪ್ರಸ್ತುತ ಯೋಜನೆಗೆ 1,589 ಕೋಟಿ ರೂಪಾಯಿ ವೆಚ್ಚ ತಗಲಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ ಮತ್ತು ಭಾರತೀಯ ನೌಕಾಪಡೆಯ ನಡುವೆ 2019ರಲ್ಲಿ ಒಪ್ಪಂದ ಏರ್ಪಟ್ಟಿತ್ತು. ಸಿಎಂಎಸ್-03 ಉಪಗ್ರಹ 2013ರಲ್ಲಿ ಉಡಾವಣೆಗೊಂಡ ಹಳೆಯದಾದ ಜಿಸ್ಯಾಟ್-7 ರುಕ್ಮಿಣಿ ಉಪಗ್ರಹದ ಬದಲಿಗೆ ಕಾರ್ಯಾಚರಿಸಲಿದೆ. ಜಿಸ್ಯಾಟ್-7 ರುಕ್ಮಿಣಿ ಇಲ್ಲಿಯತನಕ ನೌಕಾಪಡೆಯ ಪ್ರಮುಖ ಸಂವಹನದ ಸಾಧನವಾಗಿತ್ತು.

