ಬೆಳಗಾವಿ: ಕನ್ನಡ ರಾಜ್ಯೋತ್ಸವ (Kannada Rajyotsava) ದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್, ಶಿವಸೇನೆ (Shiv Sena) ದುರುಳರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ.
ಬೆಳಗಾವಿಯಲ್ಲಿ (Belagavi) ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಗಡಿಯಲ್ಲಿರುವ ಮರಾಠಿಗರನ್ನ ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡ್ತಿದೆ. ಇಂದೂ ಸಹ ಬೆಳಗಾವಿ ನಗರದ ಸರ್ದಾರ ಮೈದಾನದಲ್ಲಿ ರಾಜ್ಯೋತ್ಸವ ವಿರುದ್ಧ ಕರಾಳ ದಿನದ ರ‍್ಯಾಲಿ ಮಾಡಿದರು. ಸರ್ದಾರ್ ಮೈದಾನದಿಂದ ವಿವಿಧ ಭಾಗಗಗಳಲ್ಲಿ ಸಂಚರಿಸಿ ಕಡಗೆ ಮರಾಠ ಮಂಡಳದಲ್ಲಿ ಸಮಾವೇಶ ಮಾಡಿ ಕರಾಳ ದಿನಾಚರಣೆ ನಡೆಸಿತು.
ಯಾವುದೇ ರೀತಿಯ ಪರವಾನಗಿ ಪಡೆಯದೇ ಕರಾಳ ದಿನಾಚರಣೆ ಆಚರಿಸಿ ಭಾಷಾ ಸಾಮರಸ್ಯ ಶಾಂತಿ ಭಂಗ ಸೇರಿದಂತೆ ವಿವಿಧ ಕಲಂಗಳಲ್ಲಿ ಮಾಳಮಾರುತಿ ಠಾಣೆಯಲ್ಲಿ ಎಂಇಎಸ್ ಪುಂಡ ಶುಭಂ ಶಳಕೆ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶುಭಂ ಶಳಕೆಯನ್ನು ವಶಕ್ಕೆ ಪಡೆದರು.
ಈ ಮಧ್ಯೆ, ಮಹಾರಾಷ್ಟ್ರ ಗಡಿಯಲ್ಲಿ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗಡಿಯಲ್ಲಿ ಶಿವಸೇನೆ ಪುಂಡರು ಬೆಳಗಾವಿ ಜಿಲ್ಲೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಇನ್ನು, ಎಂಇಎಸ್ ಪುಂಡಾಟಿಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ, ಗದಗ ನಗರದ ಕೆ.ಹೆಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಮಧ್ಯೆ ಎಂಟ್ರಿಕೊಟ್ಟ ಕೋತಿಯೊಂದು ಸ್ತಬ್ಧಚಿತ್ರ ವಾಹನದ ಬಳಿ ಹೊರಟಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಒದ್ದು ಬೀಳಿಸಿ ಎಸ್ಕೇಪ್ ಆದ ಪ್ರಸಂಗವೂ ನಡೀತು.


