ಮಂಗಳೂರು: ಇಲ್ಲಿನ ನಟೋರಿಯಸ್ ರೌಡಿ ಕೇರಳದಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ.
ನಟೋರಿಯಸ್ ರೌಡಿ ನೌಫಾಲ್ ಅಲಿಯಾಸ್ ಟೊಪ್ಪಿ ನೌಫಾಲ್ನನ್ನು ಕೇರಳದ ಉಪ್ಪಳ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈತ 2017ರಲ್ಲಿ ಫರಂಗಿಪೇಟೆಯಲ್ಲಿ ಅಡ್ಯಾರ್ನ ರೌಡಿ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ನೌಫಾಲ್.

