ಪಾಟ್ನಾ: ನಮ್ಮ ಸರ್ಕಾರದ ಆಳ್ವಿಕೆಯಲ್ಲಿ ಅಭಿವೃದ್ಧಿಯ ವೇಗ ಬಹಳಷ್ಟು ಹೆಚ್ಚಾಗಿದೆ. ಎನ್‌ಡಿಎ (NDA) ಮಾತ್ರ ರಾಜ್ಯವನ್ನು ಅಭಿವೃದ್ಧಿಪಡಿಸಬಹುದು. ಹೀಗಾಗಿ ಎನ್‌ಡಿಎಗೆ ಮತ ಚಲಾಯಿಸುವ ಮೂಲಕ ಮತ್ತೊಂದು ಅವಕಾಶ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ (NitishKumar) ಜನರಿಗೆ ಮನವಿ ಮಾಡಿದ್ದಾರೆ.
ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಸೋಶಿಯಲ್ ಮೀಡಿಯಾದಲ್ಲಿ ನಿತೀಶ್ ಕುಮಾರ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ನಮಗೆ, ಎನ್‌ಡಿಎಗೆ, ಇನ್ನೊಂದು ಅವಕಾಶ ನೀಡಿ. ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ ಮತ್ತು ಬಿಹಾರವನ್ನು ಉನ್ನತ ರಾಜ್ಯಗಳಲ್ಲಿ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದ ದೇವಾಲಯ ನಿರ್ಮಾಣವಾದ ಕಥೆ – ತಿರುಮಲ ದರ್ಶನ ಸಿಗಲಿಲ್ಲವೆಂದು ಸ್ವಂತ ದೇಗುಲ ನಿರ್ಮಿಸಿದ್ದ ಭಕ್ತ!
2005ರಲ್ಲಿ ತಾವು ಮುಖ್ಯಮಂತ್ರಿಯಾದಾಗ ಬಿಹಾರದ ಸ್ಥಿತಿ ತೀರಾ ಕಳಪೆಯಾಗಿತ್ತು. ಆ ಸಮಯದಲ್ಲಿ ಬಿಹಾರಿ ಎಂದು ಕರೆಯುವುದು ‘ಅವಮಾನದ ವಿಷಯ’ವಾಗಿತ್ತು. ರಾಜ್ಯದ ಅಭಿವೃದ್ಧಿಗಾಗಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಹಗಲಿರುಳು ಶ್ರಮಿಸಿದ್ದೇನೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ಯೆಲ್ಲೋ ಮಾರ್ಗದಲ್ಲಿ ಸಂಚಾರ ಆರಂಭಿಸಿದ 5ನೇ ರೈಲು
— Nitish Kumar (@NitishKumar) November 1, 2025
ನಮ್ಮ ಸರ್ಕಾರ ಯುವಕರಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಸಾಕಷ್ಟು ಕೆಲಸ ಮಾಡಿದೆ. ದಲಿತರು ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ಕೆಲಸ ಮಾಡಿದ್ದೇನೆ. ಬಿಹಾರಿಯಾಗಿರುವುದು ಅವಮಾನದ ವಿಷಯವಲ್ಲ, ಆದರೆ ಗೌರವದ ವಿಷಯ ಎಂದು ನುಡಿದರು. ಇದನ್ನೂ ಓದಿ: ತೀವ್ರ ಬಡತನ ನಿರ್ಮೂಲನೆ ಮಾಡಿದ ಭಾರತದ ಮೊದಲ ರಾಜ್ಯ ಕೇರಳ: ಪಿಣರಾಯಿ ವಿಜಯನ್
ಹಿಂದಿನ ಸರ್ಕಾರ ಮಹಿಳೆಯರಿಗಾಗಿ ಯಾವುದೇ ಕೆಲಸ ಮಾಡಲಿಲ್ಲ. ನಾವು ಈಗ ಮಹಿಳೆಯರನ್ನು ಎಷ್ಟು ಬಲಿಷ್ಠರನ್ನಾಗಿ ಮಾಡಿದ್ದೇವೆ ಎಂದರೆ ಅವರು ಇನ್ನು ಮುಂದೆ ಯಾರನ್ನೂ ಅವಲಂಬಿಸಲ್ಲ ಮತ್ತು ಅವರ ಕುಟುಂಬಗಳು ಮತ್ತು ಮಕ್ಕಳಿಗಾಗಿ ಎಲ್ಲಾ ಕೆಲಸಗಳನ್ನು ಮಾಡಬಹುದು. ನಾವು ಮೊದಲಿನಿಂದಲೂ ಸಮಾಜದ ಎಲ್ಲಾ ವರ್ಗಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಬ್ಬರನ್ನು ಬಲಿ ಪಡೆದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಆದೇಶ

