ಕಾಂತಾರ, ಕೆಜಿಎಫ್ಗಳಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿದ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ ಬಘೀರ (Bagheera). ಕಳೆದ ವರ್ಷ ಅಕ್ಟೋಬರ್ 31ಕ್ಕೆ ತೆರೆಕಂಡಿತ್ತು. ಶ್ರೀಮುರಳಿ ನಟನೆಯ `ಬಘೀರ’ ಸಿನಿಮಾ ಕಳೆದ ವರ್ಷ ಅಂದರೆ ಅಕ್ಟೋಬರ್ 31, 2024ರಂದು ತೆರೆಕಂಡಿತ್ತು. ಈ ಸಿನಿಮಾ ತೆರೆಕಂಡು ಒಂದು ವರ್ಷ ಕಳೆದಿದೆ. ಸೂಪರ್ ಮ್ಯಾನ್ ಕಾನ್ಸೆಪ್ಟ್ನ ಸಿನಿಮಾ ನಿರೀಕ್ಷೆಯ ಗಡಿಯನ್ನ ಮುಟ್ಟಲಿಲ್ಲ.

ರೋರಿಂಗ್ಸ್ಟಾರ್ ಶ್ರೀಮುರಳಿ (Srimurali) ಬಘೀರ ಸಿನಿಮಾದಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದರು. ನಟ ಶ್ರೀಮುರಳಿ ವಿಭಿನ್ನ ರೀತಿಯ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಪ್ರೇಕ್ಷಕರ ನಿರೀಕ್ಷೆ ಹಾಗೂ ಬಾಕ್ಸಾಫೀಸ್ನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ.
ನಟ ಶ್ರೀಮುರಳಿ ಈ ಸಿನಿಮಾ ಬಳಿಕ ಇದೇ ವರ್ಷವೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಉಗ್ರಾಯುಧಮ್ ಹಾಗೂ ಪರಾಕ್ ಸಿನಿಮಾದ ಶೂಟಿಂಗ್ನಲ್ಲಿ ಶ್ರೀಮುರಳಿ ತೊಡಗಿಕೊಂಡಿದ್ದಾರೆ. ಸದ್ಯ ಬಘೀರ ಸಿನಿಮಾ ತೆರೆಕಂಡು ಒಂದು ವರ್ಷವಾದ ಬೆನ್ನಲ್ಲೇ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ ಹೊಂಬಾಳೆ ಸಂಸ್ಥೆ ಹಾಗೂ ನಟ ಶ್ರೀಮುರಳಿ.
