– ಒಟ್ಟು 2.8 ಲಕ್ಷ ದಂಡ ವಸೂಲಿ
ಬೆಂಗಳೂರು: ಎಲ್ಲೆಂದರಲ್ಲಿ ಕಸ ಬಿಸಾಡೋರಿಗೆ ಜಿಬಿಎ (GBA) ತಕ್ಕ ಪಾಠ ಕಲಿಸಲು ಮುಂದಾಗಿದೆ. ಕಸ ಹಾಕಿದವರ ಮನೆ ಮುಂದೆಯೇ ವಾಪಸ್ ಕಸ ಸುರಿದು 2000 ರೂ. ದಂಡ ವಸೂಲಿ ಮಾಡುತ್ತಿದೆ.
ಜಿಬಿಎ ಸಿಬ್ಬಂದಿ ಈಗಾಗಲೇ ಕಸವನ್ನು ಎಲ್ಲೆಂದರಲ್ಲಿ ಬೀಸಾಕಿದ್ದವರ 218 ಮನೆಗಳ ಮುಂದೆ ಕಸವನ್ನು ವಾಪಸ್ ಸುರಿದಿದೆ. ಜೊತೆಗೆ ಒಟ್ಟು 2.8 ಲಕ್ಷ ರೂ. ದಂಡ ವಸೂಲಿ ಮಾಡಿದೆ.ಇದನ್ನೂ ಓದಿ: 1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ, 1 ಕೋಟಿ ಲಖ್‌ಪತಿ ದೀದಿಗಳಿಗೆ ನೆರವು: ಬಿಹಾರಿಗಳಿಗೆ NDA ಪ್ರಣಾಳಿಕೆ ಗಿಫ್ಟ್
ಆರ್‌ಟಿ ನಗರದ (RT Nagar) ಗಂಗಾನಗರದಲ್ಲಿ ಖಾಲಿ ಜಾಗದಲ್ಲಿ ಕಸ ಸುರಿದವರ ಮನೆಯ ಮುಂದೆ ಕಸ ವಾಪಸ್ ಕಸ ಸುರಿಯುತ್ತಿದ್ದು, ಘನತ್ಯಾಜ್ಯ ನಿರ್ವಹಣೆಯ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರಿಗೌಡ ಅವರು ಅಲ್ಲಿನ ನಿವಾಸಿಗಳಿಗೆ ಬುದ್ಧಿವಾದ ಹೇಳಿದ್ದಾರೆ.
ಜಿಬಿಎ ಮಾರ್ಷಲ್‌ಗಳು ಬೆಳ್ಳಂಬೆಳಗ್ಗೆ ಕಸದ ಎಸೆದ ಮಹಿಳೆಯಿಂದಲೇ ಕಸ ಎತ್ತಿಸಿದ್ದಾರೆ. ಬೆಳಿಗ್ಗೆ 5ರ ಸುಮಾರಿಗೆ ಕಸ ಬೀಸಾಡುವ ಜಾಗದಲ್ಲೇ ಮಾರ್ಷಲ್‌ಗಳು ಕಾದು ಕುಳಿತಿದ್ದರು. ಮಹಿಳೆಯ ಬಂದು ಕಸ ಎಸೆಯುತ್ತಿದ್ದಂತೆ ವಿಡಿಯೋ ಮಾಡಿದ್ದಾರೆ. ಇದನ್ನು ಕಂಡ ಮಹಿಳೆ ಬೀಸಾಡಿದ ಕಸವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.ಇದನ್ನೂ ಓದಿ: ಶೃಂಗೇರಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ
