– ದರ್ಶನ್ ಜೈಲಲ್ಲಿ; ತಂದೆ ಅನುಪಸ್ಥಿತಿಯಲ್ಲಿ ಪುತ್ರನ ಹುಟ್ಟುಹಬ್ಬ
ನಟ ದರ್ಶನ್ (Darshan) ಪುತ್ರ ವಿನೀಶ್‌ಗೆ ಹುಟ್ಟುಹಬ್ಬದ ಸಂಭ್ರಮ. ಅಪ್ಪನಿಲ್ಲದೇ ಮೊದಲ ಬಾರಿಗೆ ವಿನೀಶ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಅಪ್ಪನ ಅನುಪಸ್ಥಿತಿ ನೆನೆದು ಬೇಸರದಲ್ಲಿರುವ ಮಗ ವಿನೀಶ್‌ಗೆ ಧೈರ್ಯ ತುಂಬಿದ್ದಾರೆ ವಿಜಯಲಕ್ಷ್ಮಿ ದರ್ಶನ್. ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿ ಮಗನಿಗೆ ಧೈರ್ಯ ತುಂಬಿದ್ದಾರೆ.
ನೀನು ಕೆಲ ಘಟನೆಗಳು ಹಾಗೂ ಪರಿಸ್ಥಿತಿಯನ್ನ ಎದುರಿಸಿ ನಿಂತಿರುವುದು ನನಗೆ ಹೆಮ್ಮೆ ತಂದಿದೆ. ನಾನು, ನಿಮ್ಮ ಅಪ್ಪ ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ ಎಂದು ಬರೆದು ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ. ಈ ಬಾರಿ ಅಪ್ಪನ ವಿಶಸ್ ಹಾಗೂ ಗಿಫ್ಟ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ದರ್ಶನ್ ಪುತ್ರ ವಿನೀಶ್. ಪ್ರತಿ ವರ್ಷ ವಿನೀಶ್ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಿದ್ದ ದರ್ಶನ್ ಫ್ಯಾಮಿಲಿಯಲ್ಲಿ ಈ ಬಾರಿ ಸಂಭ್ರಮವಿಲ್ಲ.
 
View this post on Instagram 
ಕಳೆದ ವರ್ಷ ನಟ ದರ್ಶನ್ ಅ.30 ಕ್ಕೆ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಆಚೆ ಬಂದಿದ್ದರು. ಹೊಸಕೆರೆಹಳ್ಳಿ ಫ್ಲ್ಯಾಟ್‌ನಲ್ಲಿ ವಿನೀಶ್ ಬರ್ತ್‌ಡೇ ಆಚರಣೆ ಮಾಡಿದ್ದರು. ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಆಚೆ ಬಂದು ಬರ್ತ್‌ಡೇ ಜೊತೆಗೆ ದೀಪಾವಳಿ ಆಚರಣೆ ಮಾಡಿದ್ದರು. ಈ ಬಾರಿ ಬರ್ತ್‌ಡೇಗೆ ಅಪ್ಪನನ್ನ ದರ್ಶನ್ ಪುತ್ರ ವಿನೀಶ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪುತ್ರನಿಗೆ ವಿಶ್ ಮಾಡಿ ತಾಯಿ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದಾರೆ.
 


 
		 
		 
		 
		 
		
 
		 
		 
		 
		