ಮಂಡ್ಯ: ಟಿಪ್ಪರ್ ಹಾಗೂ ಇನ್ನೋವಾ ಕಾರಿನ (Innova) ನಡುವೆ ಡಿಕ್ಕಿಯಾಗಿ (Accident), ಕಾರು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ.
ಹುಣಸೂರು ಮೂಲದ ಚಂದ್ರಶೇಖರ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬುಧವಾರ (ಅ.29) ತಡರಾತ್ರಿ ಈ ಘಟನೆ ನಡೆದಿದೆ. ಹುಣಸೂರು ಕಡೆಗೆ ಹೋಗುತ್ತಿದ್ದ ಕಾರು, ಶ್ರೀರಂಗಪಟ್ಟಣ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿತ್ತು. ತಕ್ಷಣ ಕಾರು ಹೊತ್ತಿ ಉರಿದಿತ್ತು. ಕಾರಿನಿಂದ ಹೊರಬರಲಾರದೆ ಚಾಲಕ ಸಾವನ್ನಪ್ಪಿದೆ. ಇದನ್ನೂ ಓದಿ: ನೆಲಮಂಗಲ | ರಸ್ತೆ ದುರಸ್ತಿ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ – ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಚಂದ್ರಶೇಖರ್ ಮೃತದೇಹವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಇದನ್ನೂ ಓದಿ: ಲವ್ವರ್ ನೋಡಲು ಬಂದ ಯುವಕನಿಗೆ ಥಳಿಸಿ ಹತ್ಯೆ; ಮನನೊಂದು ಕತ್ತು ಕೊಯ್ದುಕೊಂಡ ಪ್ರೇಯಸಿ

