ಬೆಂಗಳೂರು: ಈಗಲೇ ಯಾಕೆ ಪಥ ಸಂಚಲನ (RSS Route March) ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priynak Kharge) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಕ್ಷೇತ್ರ ಚಿತ್ತಪುರದಲ್ಲಿ (Chittapur) ತಾಲೂಕು ಆಡಳಿತ ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ನೀಡದ್ದಕ್ಕೆ ಸುದಿಗೋಷ್ಠಿ ನಡೆಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಮತ್ತೊಮ್ಮೆ ಅರ್ಜಿ ಹಾಕಿದರೆ ಪರಿಗಣಿಸಿ ಎಂದು ಕೋರ್ಟ್ ಹೇಳಿದೆ. ಆದರೆ ಇಂದು ಪಥ ಸಂಚಲನ ಮಾಡುವಂತಿಲ್ಲ ಮಾಡಲೂಬಾರದು ಎಂದು ಕೋರ್ಟ್ ಪ್ರಕಾರ ಹೇಳಿದಂತಾಯ್ತು. ಭೀಮ್ ಆರ್ಮಿ, ದಲಿತ ಪ್ಯಾಂಥರ್‌ಗೆ ಪಥಸಂಚಲನಕ್ಕೆ ಹಕ್ಕಿದೆ, ಆರ್‌ಎಸ್‌ಎಸ್‌ಗೂ, ಕಾಂಗ್ರೆಸ್‌ಗೆ ಹಕ್ಕು ಇದೆ. ಸಮಾಜದಲ್ಲಿ ಶಾಂತಿ ಕಾಪಾಡುವುದು ಬಹಳ ಮುಖ್ಯ. ಮತ್ತೊಮ್ಮೆ ಅರ್ಜಿ ಕೊಡಲಿ. ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಆರ್‌ಎಸ್‌ಎಸ್ Vs ಸರ್ಕಾರ – ನ.2 ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಒಪ್ಪಿದ ಲಾಯರ್ | ಹೈಕೋರ್ಟ್‌ನಲ್ಲಿ ಏನಾಯಿತು?
ಆರ್‌ಎಸ್‌ಎಸ್ ಕಲಬುರಗಿ ಜಿಲ್ಲೆಯಲ್ಲಿ ಪಥಸಂಚಲನ ಮಾಡುತ್ತೇವೆ ಎಂದು ಹೇಳಿತ್ತು. ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಪತ್ರ ಬರೆದಿದ್ದಕ್ಕೆ ಉದ್ದೇಶಪೂರ್ವಕವಾಗಿ ನನ್ನ ಮತ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆದಮೇಲೆ ನನಗೆ ಬುದ್ದಿ ಕಲಿಸಬೇಕೆಂದು ಚಿತ್ತಾಪುರದಲ್ಲಿ ಪಥಸಂಚಲನದ ಪ್ಲ್ಯಾನ್ ಮಾಡಿದ್ದಾರೆ ಎಂದರು.
ಆರ್‌ಎಸ್‌ಎಸ್‌ಗೆ ತಕ್ಷಣವೇ ಪಥ ಸಂಚಲನ ಮಾಡಿ ಏನು ಸಾಧಿಸಬೇಕಿತ್ತು? ಅಮಾಯಕ ವ್ಯಕ್ತಿಯಿಂದ ಬೆದರಿಕೆ ಹಾಕಿಸ್ತೀರಿ. ನಿಮ್ಮ ಮಾತಿನಿಂದ ಜನರಿಗೆ ಘಾಸಿಯಾಗಿದೆ ಆಕ್ರೋಶವಿದೆ ಇದೇ ಸಂದರ್ಭದಲ್ಲಿ ಯಾಕೆ ಪಥಸಂಚಲನ ಮಾಡಬೇಕು ಎಂದು ಕೇಳಿದರು. ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಹಾಳಾಗಬಹುದು – ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಇಲ್ಲ
ಚಿತ್ತಾಪುರದ ಹಿಂದಿನ ಬಿಜೆಪಿ ಅಭ್ಯರ್ಥಿ ಪ್ರೆಸ್ ಮೀಟ್ ಮಾಡಿ ಆರ್‌ಎಸ್‌ಎಸ್ ಕಟ್ಟರ್ ಸಂಘಟನೆ. ಬೆದರಿಕೆ ಅಲ್ಲ ನಾಳೆ ನಿಮ್ಮ ಮನೆಗೂ ಬರುತ್ತಾರೆ. ಹುಷಾರು ಅಂತ ಮತ್ತೆ ಬೆದರಿಕೆ ಹಾಕ್ತಾನೆ. ಇದಾದ ಮೇಲೆ ಮತ್ತೆ ಪಥಸಂಚಲನ ಮಾಡಬೇಕಾ? ಚಿತ್ತಾಪುರದ ಜನಪ್ರತಿನಿಧಿಯನ್ನು ನಿಂದಿಸಿದ ನಿಮಗೆ ಇವತ್ತೇ ಅವಕಾಶ ಕೊಡಬೇಕೇ ಎಂದು ಪ್ರಶ್ನಿಸಿದರು.
ಯಾವುದೋ ಕಾಗದದಲ್ಲಿ ಚಿತ್ತಾಪುರದ ವ್ಯಕ್ತಿಯೂ ಅಲ್ಲದವರಿಂದ ಅರ್ಜಿ ಹಾಕಿಸಿದ್ದಾರೆ. ಅನುಮತಿ ಕೇಳದ ಅವರು ಕೇವಲ ಕಾಗದದಲ್ಲಿ ರೂಟ್ ಮ್ಯಾಪ್ ಹಾಕಿ ಮಾಹಿತಿಗಾಗಿ ಅಂತ ಬರೆದುಕೊಟ್ಟಿದ್ದಾರೆ. ಆಗ ಭೀಮ್ ಆರ್ಮಿಯೂ ಕೂಡ ಪಥಸಂಚಲನಕ್ಕೆ ಅನುಮತಿ ಕೇಳಿದ್ದಾರೆ. ಆರ್‌ಎಸ್‌ಎಸ್ ವ್ಯಕ್ತಿಯಿಂದ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಲಾಗಿದೆ. ಈ ಸಂಘಟನೆಯವರು ಚಿತ್ತಾಪುರದಲ್ಲಿ ಮಾಡುವಾಗ ನಮಗೂ ಅವಕಾಶ ಕೊಡಿ ಅಂತ ಪತ್ರ ಬರೆದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ಅದೇ ಸಂಘಟನೆ ನಮ್ಮ ತಾಲೂಕಲ್ಲಿ ಪಥಸಂಚಲನ ಮಾಡುವಾಗ ನಮ್ಮ ಜನರು ಏನು ಮಾಡಬೇಕು ಎಂದು ಕೇಳಿದರು.
ನಮ್ಮ ಪರವಾಗಿ ಜನರೂ ಇದ್ದಾರೆ, ನಾವೇನಾದರೂ ಪ್ರಚೋದನೆ ಕೊಟ್ಟಿದ್ದೀವಾ? ಎಂಎಲ್‌ಎ ಅಭ್ಯರ್ಥಿ ಬೈತಾರೆ, ಸಂಘಟನೆ ಬೈಯುತ್ತದೆ, ಅಲ್ಲಿಯೇ ಪಥ ಸಂಚಲನ ಮಾಡುತ್ತೀರಾ ಎಂದು ಪ್ರಿಯಾಂಕ್ ಖರ್ಗೆ ನಾನಾ ಪ್ರಶ್ನೆಗಳನ್ನು ಕೇಳಿದ್ದಾರೆ.