ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ (Deepavli) ಗಿಫ್ಟ್ ನೀಡಿದ್ದು ನವೆಂಬರ್ 1 ರಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಇದು ಬೆಂಗಳೂರಿನ 15 ಲಕ್ಷಕ್ಕೂ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗಲಿದೆ. ಇದೊಂದು ಕ್ರಾಂತಿಕಾರಕ ತೀರ್ಮಾನ. ಆಸ್ತಿ ಶುದ್ಧೀಕರಣಕ್ಕೆ ನಾಂದಿ ಅಂತ ಬೆಂಗಳೂರು (Bengaluru) ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಗೆ ವಿಧಾನಸೌಧದಲ್ಲಿ ಚಾಲನೆ ನೀಡಿದರು.
2 ಸಾವಿರ ಚದರ ಅಡಿ ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ನಕ್ಷೆ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. ಸದ್ಯಕ್ಕೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಮಾರ್ಗಸೂಚಿ ದರಕ್ಕೆ ಶೇ.5ರಷ್ಟು ಹಣ ಕಟ್ಟಬೇಕು. 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿಯಾಗಲಿದ್ದು, ಆನಂತರ ದರ ನಿಗದಿಯಾಗಲಿದೆ. ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಅಂತ ಡಿಕೆಶಿ ಘೋಷಿಸಿದ್ದಾರೆ. ಇದನ್ನೂಓದಿ: ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ MSIL ಸೂಪರ್ ಮಾರ್ಕೆಟ್ ಚಿಂತನೆ: ಎಂ ಬಿ ಪಾಟೀಲ್
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ
ಬೆಂಗಳೂರಿನಲ್ಲಿ ಸದ್ಯ ಅಂದಾಜು 32 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಸದ್ಯ 17.5 ಲಕ್ಷ ಎ ಖಾತಾ ಆಸ್ತಿ ಇದ್ದರೆ 7.5 ಲಕ್ಷ ಬಿ ಖಾತಾ ಆಸ್ತಿಗಳಾಗಿವೆ. ಇನ್ನುಳಿದ 7.8 ಲಕ್ಷ ಆಸ್ತಿಗಳಿಗೆ ಯಾವುದೇ ಖಾತಾಗಳಿಲ್ಲ.
500 ರೂ. ಕಟ್ಟಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಜಿಬಿಎ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ. 100 ದಿನವರೆಗೆ ಮಾರ್ಗಸೂಚಿ ದರಕ್ಕೆ 5% ಹಣ ಕಟ್ಟಬೇಕಾಗುತ್ತದೆ. 100 ದಿನದ ನಂತರ ಹೆಚ್ಚುವರಿ ಶುಲ್ಕ ಕಟ್ಟಬೇಕು. 3 ತಿಂಗಳ ನಂತರ ಹೆಚ್ಚುವರಿ ಶುಲ್ಕ ನಿಗದಿ ಆಗಲಿದೆ. ಬೆಂಗಳೂರು ಒನ್ ಕೇಂದ್ರದಲ್ಲೂ ನೋಂದಣಿಗೆ ಅವಕಾಶ ನೀಡಲಾಗಿದೆ.
ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮವಿಲ್ಲ
ನಿವೇಶನಗಳಿಗೆ ಮಾತ್ರ `ಎ’ ಖಾತಾ ಸೌಲಭ್ಯ ಸಿಗಲಿದೆ.ಆದರೆ ಬಿಲ್ಡಿಂಗ್‌ಗಳಿಗೆ ಸದ್ಯಕ್ಕೆ ಎ ಖಾತಾ ಸ್ಟೇಟಸ್ ಇರುವುದಿಲ್ಲ. ಮೊದಲು ನಿವೇಶನಗಳನ್ನ ಎ ಖಾತಾ ಆಗಿ ಪರಿವರ್ತನೆಯಾಗಲಿದೆ. ಇದಾದ ಬಳಿಕ ಕಟ್ಟಡಗಳ ಮಾನ್ಯತೆಗೆ ಸರ್ಕಾರ ಪ್ರತ್ಯೇಕ ನಿಯಮ, ಶುಲ್ಕವನ್ನು ನಿಗದಿ ಮಾಡಲಿದೆ. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ
ಎ-ಖಾತಾ ಆನ್‌ಲೈನ್‌ನಲ್ಲಿ ಅಪ್ಲೈ ಮಾಡೋದು ಹೇಗೆ? (2000 ಚ.ಮೀಟರ್‌ಗಳ ವರೆಗೆ)
1. ತಮ್ಮ ಮೊಬೈಲ್ ನಂಬರ್‌ನಿಂದ ಇಂದು ಅನಾವರಣಗೊಳ್ಳುವ https://bbmp.karnataka.gov.in/btoakhata ವೆಬ್ ಪೋರ್ಟಲ್‌ಗೆ ಹೋಗಿ ಓಟಿಪಿ ಸಹಿತ ಲಾಗಿನ್ ಆಗಬೇಕು
2. ಫೈನಲ್ ಬಿ ಖಾತಾದ ಇಪಿಐಡಿ ನಂಬರ್ ಅನ್ನು ನಮೂದಿಸಬೇಕು
3. ಆಸ್ತಿಯ ಮಾಲೀಕರು ತಮ್ಮ ಆಧಾರ್ ದೃಢೀಕರಿಸಬೇಕು.
4. ನಿವೇಶನ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
5. ಭೂಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ಸೈಟ್‌ಗಳು ಅಪ್ಲೈ ಮಾಡೋಕೆ ಅರ್ಹರು. ಫ್ಲ್ಯಾಟ್ ಇರುವವರು ಅಪ್ಲೈ ಮಾಡೋ ಆಗಿಲ್ಲ.
6. ನಗರಪಾಲಿಕೆಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
7. ಮಾರುಕಟ್ಟೆ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ʻಏಕ ನಿವೇಶನʼ ಅನುಮೋದನೆ ಶುಲ್ಕವಾಗಿ ಹಾಗೂ ಇತರೇ ಶುಲ್ಕಗಳನ್ನು ಪಾವತಿಸುವುದು.
8. ಇಷ್ಟೆಲ್ಲಾ ಪ್ರೋಸೆಸ್ ಆದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗಲಿದೆ