ಬೆಂಗಳೂರು: 2025-26ನೇ ಸಾಲಿಗೆ ರಾಜ್ಯದ ಪಿಜಿ ವೈದ್ಯಕೀಯ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಸೇರಲು ಆಸಕ್ತರಾದ ನೀಟ್ ಪಿಜಿ- 2025ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅ.17ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.
ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸಲು ಅ.17ರ ಬೆಳಿಗ್ಗೆ 11ರವರೆಗೆ ಅವಕಾಶವಿರುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: IPS ಅಧಿಕಾರಿ ಪೂರನ್ ಆತ್ಮಹತ್ಯೆ ಕೇಸ್ ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿ ಕೂಡ ಸೂಸೈಡ್
ಬಿ.ಎಸ್ಸಿ.ನರ್ಸಿಂಗ್, ಫಾರ್ಮ, ಬಿಪಿಟಿ:
ಯುಜಿಸಿಇಟಿ 2025ರ ಬಿ.ಎಸ್ಸಿ.ನರ್ಸಿಂಗ್, ಬಿ-ಫಾರ್ಮ, ಫಾರ್ಮ-ಡಿ ಮತ್ತು ಬಿಪಿಟಿ ಕೋರ್ಸುಗಳಿಗೆ ಅಂತಿಮ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ (ಕನ್ಫರ್ಮೇಷನ್ ಸ್ಲಿಪ್) ಡೌನ್ ಲೋಡ್ ಮಾಡಿಕೊಂಡು ಅ.16ರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಕೇಸ್; ಅಲೋಕ್ ಕುಮಾರ್ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ
ಇದಕ್ಕಾಗಿ ಅಭ್ಯರ್ಥಿಗಳು ಅ.16ರ ಸಂಜೆ 4ರೊಳಗೆ ಶುಲ್ಕ ಪಾವತಿಸಿ, ಸಂಜೆ 5ರೊಳಗೆ ಕನ್ಫರ್ಮೇಷನ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದೂ ಅವರು ತಿಳಿಸಿದ್ದಾರೆ.