ಉಡುಪಿ: ಕಾರ್ಕಳದ ಮಾಜಿ ಶಾಸಕ ದಿವಂಗತ ಗೋಪಾಲ ಭಂಡಾರಿ ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೆಬ್ರಿ ತಾಲೂಕು ನಿವಾಸಿಯಾಗಿರುವ ಸುದೀಪ್ ಭಂಡಾರಿ ಬಾರ್ಕೂರಿನಲ್ಲಿ ರೈಲಿಗೆ ತಲೆಕೊಟ್ಟು ಸುದೀಪ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದೀಪ್ ಭಂಡಾರಿ ಅವರು ಹೆಬ್ರಿಯಲ್ಲಿ ವೈನ್ ಶಾಪ್ ನಡೆಸುತ್ತಿದ್ದರು. ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.