ವಿಶಾಖಪಟ್ಟಣಂ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ (ICC Women’s World Cup) ಕ್ರಿಕೆಟ್ ಟೂರ್ನಿಯಲ್ಲಿಂದು ತನ್ನ 4ನೇ ಪಂದ್ಯವಾಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ಮಹಿಳಾ ತಂಡದ ಬಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದೆ. 48.5 ಓವರ್‌ಗಳಲ್ಲಿ 330 ರನ್ ಗಳಿಸಿ, ಆಸೀಸ್‌ಗೆ 331 ರನ್‌ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ (Smriti Mandhana) ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ.
Putting up a sensational performance at the 🔝 of the order 🫡
Smriti Mandhana 🤝 Pratika Rawal
Scorecard ▶ https://t.co/VP5FlL2S6Y#WomenInBlue | #CWC25 | #INDvAUS | @mandhana_smriti pic.twitter.com/QEPaNc7q8A
— BCCI Women (@BCCIWomen) October 12, 2025
ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಮಂದಾನ 66 ಎಸೆತಗಳಲ್ಲಿ 80 ರನ್ (3 ಸಿಕ್ಸರ್, 9 ಬೌಂಡರಿ) ಚಚ್ಚಿದರು. ಈ ಮೂಲಕ ಹಲವು ವಿಶ್ವದಾಖಲೆಗಳನ್ನ ಮುಡಿಗೇರಿಸಿಕೊಂಡರು. ಅಲ್ಲದೇ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇನ್ನ ಹಲವು ವಿಶ್ವದಾಖಲೆಗಳ ಬಗ್ಗೆ ನೋಡೋಣ…
A spectacular start courtesy #TeamIndia openers 🇮🇳
8️⃣0️⃣ (66) for Smriti Mandhana
7️⃣5️⃣ (96) for Pratika Rawal
The duo added a blistering 1️⃣5️⃣5️⃣ for the first wicket 🔥
Updates ▶ https://t.co/VP5FlL2S6Y#WomenInBlue | #INDvAUS | #CWC25 | @mandhana_smriti pic.twitter.com/Tyzsb3owIE
— BCCI Women (@BCCIWomen) October 12, 2025
ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
* 1,068 – ಸ್ಮೃತಿ ಮಂಧಾನ (ಭಾರತ), 18 ಇನ್ನಿಂಗ್ಸ್ – 2025
* 970 – ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ), 14 ಇನ್ನಿಂಗ್ಸ್ – 1997
* 882 – ಲಾರಾ ವೋಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), 18 ಇನ್ನಿಂಗ್ಸ್ – 2022
* 880 – ಡೆಬ್ಬಿ ಹಾಕ್ಲಿ (ನ್ಯೂಜಿಲೆಂಡ್), 16 ಇನ್ನಿಂಗ್ಸ್ – 1997
* 853 – ಆಮಿ ಸ್ಯಾಟರ್ತ್‌ವೈಟ್ (ನ್ಯೂಜಿಲೆಂಡ್), 14 ಇನ್ನಿಂಗ್ಸ್ – 2016
🚨 SMRITI MANDHANA – FIRST FEMALE CRICKETER TO REACH 1,000 ODI RUNS IN A CALENDAR YEAR. 🚨pic.twitter.com/19oGnFSg1y
— Mufaddal Vohra (@mufaddal_vohra) October 12, 2025
5,000 ರನ್ನರ್ಸ್ ಕ್ಲಬ್‌ಗೆ ಮಂದಾನ
ಅಷ್ಟೇ ಅಲ್ಲದೇ ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು. 211 ಇನ್ನಿಂಗ್ಸ್‌ಗಳಲ್ಲಿ 7,805 ರನ್ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
* 7,805 – ಮಿಥಾಲಿ ರಾಜ್ (ಭಾರತ), 211 ಇನ್ನಿಂಗ್ಸ್
* 5,992 – ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್), 180 ಇನ್ನಿಂಗ್ಸ್
* 5,925 – ಸುಜಿ ಬೇಟ್ಸ್ (ನ್ಯೂಜಿಲೆಂಡ್), 167 ಇನ್ನಿಂಗ್ಸ್
* 5.873 – ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), 163 ಇನ್ನಿಂಗ್ಸ್
* 5,022 – ಸ್ಮೃತಿ ಮಂಧಾನ (ಭಾರತ), 112 ಇನ್ನಿಂಗ್ಸ್