ಬೆಂಗಳೂರು: ಕೊಟ್ಟ ಹಣ ವಾಪಸ್ಸು ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಬಾರ್ ಮಾಲೀಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿ ನಡೆದಿದೆ.
ಇಲ್ಲಿನ ರಾಜ್ ಕುಮಾರ್ ಸಮಾಧಿ ಬಳಿಯ ಕಾವೇರಿ ಬಾರ್ ಓನರ್ ಲಕ್ಕಣ್ಣ ಚಾಕು ಇರಿತಕ್ಕೆ ಒಳಗಾದವರು. ಎರಡು ವರ್ಷಗಳ ಹಿಂದೆ ಬಾರ್ ಮಾಲೀಕ ಲಕ್ಕಣ್ಣ, ನವೀನ್ ಎಂಬವರಿಗೆ 7 ಲಕ್ಷ ರೂ. ಹಣ ನೀಡಿದ್ರು. ಆದ್ರೆ ಇಲ್ಲಿಯವರೆಗೆ ನವೀನ್ ಹಣ ವಾಪಸ್ಸು ಕೊಟ್ಟಿರಲಿಲ್ಲ.
ಇದೇ ವಿಚಾರವಾಗಿ ಗುರುವಾರ ರಾತ್ರಿ ಕಾವೇರಿ ಬಾರ್ ಬಳಿ ಇಬ್ಬರ ಮಧ್ಯೆ ವಾಗ್ವಾದ ನಡೆದು ಈ ವೇಳೆ ನವೀನ್, ಲಕ್ಕಣ್ಣಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.