ವಿಜಯಪುರ: ನೀರು ಕುಡಿಯಲು ಹೋದ ಯುವಕನನ್ನು ಮೊಸಳೆ ಎಳೆದೊಯ್ದು ಯುವಕ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಂಗಾರ ಗುಂಡ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಸವರಾಜ ಮಾದರ್ ಎಂಬಾತ ಕುರಿ ಮೇಯಿಸಲು ಹೊಗಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬಸವರಾಜ ಮಾದರ್ ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದಾಗ ಮೊಸಳೆ ಎಳೆದುಕೊಂಡು ಹೋಗಿದೆ. ಘಟನೆಯ ಬಳಿಕ ಬಸವರಾಜನನ್ನು ಪತ್ತೆ ಹಚ್ಚಲು ರಾತ್ರಿವರೆಗೂ ಮುದ್ದೇಬಿಹಾಳ ತಾಲೂಕು ಆಡಳಿತ, ಅರಣ್ಯ ಅಧಿಕಾರಿಗಳ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ರು. ಅದರೆ ಬಸವರಾಜ ಪತ್ತೆ ಅಗಿರಲಿಲ್ಲ. ಇಂದು ಬೆಳಿಗ್ಗೆ ನದಿಯಲ್ಲಿ ತೇಲುತ್ತಿದ್ದ ಬಸವರಾಜನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.
ಘಟನೆ ಸಂಬಂಧ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.