– ಎಲ್ಲ ಮಾರ್ಗಗಳ ಪರಿಶೀಲನೆಗೆ ಸಿಎಂ ಆದೇಶ
ಬೆಂಗಳೂರು: ಗ್ರೇಟರ್ ಬೆಂಗಳೂರು (GBA) ವ್ಯಾಪ್ತಿ ಹಾಗೂ ರಾಜ್ಯದ ಇತರೆಡೆ ನಿರ್ಮಾಣ ಹಂತದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ (Karnaraka Government) ವಿಫಲವಾಗಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದೇ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಕಾನೂನು ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಕಾನೂನು ಇಲಾಖೆಯ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಎನ್. ಚಲುವರಾಯಸ್ವಾಮಿ
ಸಭೆಯ ಬಳಿಕ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಜಿಬಿಎಯಿಂದ ನಾವು ಪ್ರಪೋಸಲ್ ಕೊಟ್ಟಿದ್ವಿ. ಆದ್ರೆ ಇದು ಪಂಚಾಯತ್, ಮುನಿಸಿಪಾಲಿಟಿಗೂ ಎಲ್ಲದ್ದಕ್ಕೂ ಬೇಕು. ತಮಿಳುನಾಡು ಸೇರಿ ಬೇರೆ ಬೇರೆ ರಾಜ್ಯದ ಮಾಹಿತಿ ಪಡೆದಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಏನಾದ್ರು ಮಾರ್ಗ ಇದೆಯಾ ಅಂತ ಪರಿಶೀಲನೆ ಮಾಡಲು ಕಾನೂನು ಇಲಾಖೆಗೆ ಹೇಳಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್
ಅನುಮತಿ ಪಡೆಯದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ಕೊಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶ ಇದೆ. ಹೀಗಾಗಿ ಸಿಎಂ ಅವರ ನೇತೃತ್ವದಲ್ಲಿ ಸಭೆ ಆಗಿದೆ. ಎಲ್ಲಾ ಇಲಾಖೆ ಸಚಿವರು ಭಾಗಿಯಾಗಿದ್ದರು, ಎಜಿ ಕೂಡಾ ಇದ್ದರು. ಇವತ್ತಿನ ಸಭೆಯಲ್ಲಿ ಅನೇಕ ಅಭಿಪ್ರಾಯಗಳು ಬಂದಿವೆ. ಅವಕಾಶ ಕೊಡೋಕೆ ಕಾನೂನಿನಲ್ಲಿ ಅನೇಕ ಅಡೆತಡೆಗಳು ಇವೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ 30*40 ಸೈಟ್ ಗೆ ಅನುಮತಿ ಕೊಡೋ ತೀರ್ಮಾನ ಮಾಡಿದ್ದೇವೆ. ಇದರ ಮೇಲೆ ಜಾಸ್ತಿ ಅಳತೆಯಲ್ಲಿ ಇರೋ ಕಟ್ಟಡಗಳಿಗೆ ಕೊಡೋದು ಹೇಗೆ ಅಂತ ಚರ್ಚೆ ಆಗಿದೆ. ನಾಳೆಯ (ಗುರುವಾರ) ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಹೊಸ ಕಟ್ಟಡ ಕಟ್ಟಲು ಇನ್ನು ಮುಂದೆ ಬಿಡೊಲ್ಲ. ಈಗ ಕಟ್ಟಿರೋರಿಗೆ ಸಹಾಯ ಮಾಡೋದಕ್ಕೆ ದಾರಿ ಇದೆಯಾ ನೋಡ್ತಾ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ ಕ್ಲೈಮ್ಯಾಕ್ಸ್ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲಮಂಡಳಿ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.