ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟ ಶುರು ಮಾಡುವ ಹೊತ್ತಿಗೆ ಬಿಗ್ ಬಾಸ್‌ಗೆ ಶಾಕ್ ಕೊಟ್ಟಿದ್ದಾರೆ ಅಧಿಕಾರಿಗಳು. ಹೀಗಾಗಿ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ತಂಡ ಕೆಂಡಾಮಂಡಲವಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಹಾಗೂ ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿರುವ ಜಾಲಿವುಡ್ ಆಡಳಿತ ಮಂಡಳಿ, ಎಲ್ಲಾ ಅನುಮತಿ ಇದೆ ಅಂತ ಸುಳ್ಳುಗಳನ್ನ ಹೇಳಿತ್ತು. ಇದರಿಂದ ಜಾಲಿವುಡ್ ತಂಡದ ವಿರುದ್ಧ ಬಿಗ್ ಬಾಸ್ ಆಡಳಿತ ಮಂಡಳಿ ಹರಿಹಾಯ್ದಿದೆ. ನಿನ್ನೆ ಜಾಲಿವುಡ್‌ಗೆ ಪೊಲೀಸ್ರು ಬರುವವರೆಗೂ ಗೌಪ್ಯತೆ ಕಾಪಾಡಿದ್ದ ಜಾಲಿವುಡ್, ಜಾಲಿವುಡ್ ಮ್ಯಾನೇಜ್ಮೆಂಟ್ ಎಡವಟ್ಟಿನಿಂದ 2 ದಿನ ಬಿಗ್ ಬಾಸ್ ಚಿತ್ರೀಕರಣ ಸ್ಥಗಿತವಾಗಿದೆ.
ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ಮುಂಬರುವ ಎಪಿಸೋಡ್ ಗಳಿಗೆ ತೊಂದರೆಯಾಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ ಆಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತ್ತಿದೆ. ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಿಂದ ಹೊರ ತಂದಿರುವ ಕಾರಣ, ಎರಡು ವಾರದ ಪರಿಶ್ರಮ ವ್ಯರ್ಥವೆಂದು ಅಸಮಧಾನ ಹೊರಹಾಕಿದೆ ಬಿಗ್ ಬಾಸ್ ಆಯೋಜನಾ ಮಂಡಳಿ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.