ಚೆನ್ನೈ: ನಂಬಿಕೆ ಮತ್ತು ಜಾನಪದದ ಮಿಶ್ರಣವೇ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಎಂದು ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (K Annamalai) ಕಾಂತಾರ-1 ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರ-1 ಸಿನಿಮಾದ ಬಗ್ಗೆ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಅಣ್ಣಾಮಲೈ ಕೂಡ ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರದ ಬಗ್ಗೆ ಹಾಗೂ ರಿಷಬ್ ಶೆಟ್ಟಿ ನಟನೆಯನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ರಾಕೇಶ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದ್ರೆ ಜನರಿಗೆ ಆತನ ಮೇಲಿರುವ ಪ್ರೀತಿಯನ್ನ ನೋಡ್ತಿದ್ದೀನಿ: ಗುಲ್ಶನ್ ದೇವಯ್ಯ
Watched #KantaraChapter1, a breathtaking blend of faith & folklore!@shetty_rishab avaru delivers a scintillating performance both as the director and lead actor, bringing together the essence of Dharma, the culture of the Tulu Nadu, the worship of Panjurli Deva and Guliga and… pic.twitter.com/rz23ohLpdh
— K.Annamalai (@annamalai_k) October 6, 2025
ಅಣ್ಣಾಮಲೈ ಹೇಳಿದ್ದೇನು?
ಕಾಂತಾರ ಚಾಪ್ಟರ್-1 ಸಿನಿಮಾ ವೀಕ್ಷಿಸಿದೆ. ಈ ಸಿನಿಮಾ ನಂಬಿಕೆ ಮತ್ತು ಜಾನಪದದ ಮಿಶ್ರಣವಾಗಿದೆ. ರಿಷಬ್ ಶೆಟ್ಟಿಯವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಧರ್ಮದ ಸಾರ, ತುಳುನಾಡಿನ ಸಂಸ್ಕೃತಿ, ಪಂಜುರ್ಲಿ ದೇವರು ಮತ್ತು ಗುಳಿಗನ ಆರಾಧನೆ ಮತ್ತು ಅವುಗಳ ವಿವಿಧ ಅಭಿವ್ಯಕ್ತಿಗಳನ್ನು ಒಟ್ಟುಗೂಡಿಸುತ್ತಾರೆ. ವಿಶ್ವವನ್ನು ಸ್ಥಿರವಾಗಿರಿಸುವ ಮತ್ತು ಅದನ್ನು ಧರ್ಮದ ಹಾದಿಗೆ ಮರಳಿ ತರುವ ಪಂಚ ಭೂತಗಳ ಸಮತೋಲನವನ್ನು ಸಿನಿಮಾದಲ್ಲಿ ಸ್ಪಷ್ಟವಾಗಿ ಸೆರೆಹಿಡಿಯಲಾಗಿದೆ. ಚಿತ್ರದ ಪ್ರತಿಯೊಂದು ಚೌಕಟ್ಟು ಕರಕುಶಲತೆಯನ್ನು ಪ್ರದರ್ಶಿಸುತ್ತದೆ. ಇದು ನಿಜವಾಗಿಯೂ ವಿಶ್ವ ದರ್ಜೆಯ ನಿರ್ಮಾಣ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಅದ್ಭುತ ಭಾರತೀಯ ಚಿತ್ರ, ಅಭಿನಯವು ಪೀಳಿಗೆಗೆ ಸ್ಫೂರ್ತಿ: ರಿಷಬ್ ನಟನೆಗೆ ರಿತೇಶ್ ದೇಶಮುಖ್ ಚಪ್ಪಾಳೆ
ನಾಗರಿಕ ಸೇವಕನಾಗಿ ನನ್ನ ಸೇವೆಯ ಸಮಯದಲ್ಲಿ ಅಂತಹ ಆಳವಾದ ಬೇರೂರಿರುವ ಸಂಪ್ರದಾಯಗಳನ್ನು ನೇರವಾಗಿ ಕಂಡಿದ್ದೇನೆ. ಈ ಚಿತ್ರವನ್ನು ನೋಡಿದ ಮೇಲೆ ಆಧ್ಯಾತ್ಮಿಕ ಮರಳುವಿಕೆ ಮತ್ತು ನೆನಪಿನ ಹಾದಿಯಲ್ಲಿ ನಡೆದಂತೆ ಭಾಸವಾಯಿತು. ನಮ್ಮ ಚಲನಚಿತ್ರಗಳು ವೋಕ್ ಸಂಸ್ಕೃತಿಯಿಂದ ಪ್ರಾಬಲ್ಯ ಹೊಂದಿರುವ ಯುಗದಲ್ಲಿ, ಭಾರತದ ಆತ್ಮವನ್ನು ಮತ್ತೊಮ್ಮೆ ಬೆಳಕಿಗೆ ತಂದಿದ್ದಕ್ಕಾಗಿ ಹೊಂಬಾಳೆ ಫಿಲಂಸ್‌ಗೆ ಧನ್ಯವಾದಗಳು ಎಂದು ಹೊಗಳಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್ ಆರಂಭಿಸಿದ ಕಾಂತಾರ
ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟರ್-1 ಚಿತ್ರ ಅ.2ರಂದು 7 ಭಾಷೆಗಳಲ್ಲಿ ತೆರೆಕಂಡಿದ್ದು, ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಈಗಾಗಲೇ ಎಲ್ಲಾ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಶೋ ನಡೆಯುತ್ತಿದ್ದು, ಜನರು ಫುಲ್ ಮಾರ್ಕ್ಸ್ ನೀಡುತ್ತಿದ್ದಾರೆ. ಕಾಂತಾರ-1 ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ 223 ಕೋಟಿಗೂ ಹೆಚ್ಚು ಹಣವನ್ನು ಗಳಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ