ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಈಗ ಮುಸ್ಲಿಮರೇ ಅಕ್ರಮವಾಗಿ ನಿರ್ಮಾಣಗೊಂಡ ಮಸೀದಿಯನ್ನು (Mosque) ಜೆಸಿಬಿಯಿಂದ ಕೆಡವಿದ್ದಾರೆ. ಸಂಭಾಲ್ (Sambhal) ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮರು ಭಾನುವಾರ ಗೌಸುಲ್ಬರಾ ಮಸೀದಿಯನ್ನು ನೆಲಸಮ ಮಾಡಿದ್ದಾರೆ.
ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಮಸೀದಿಯನ್ನು ತೆಗೆಯುವಂತೆ ಜಿಲ್ಲಾಡಳಿತ 4 ದಿನಗಳ ಡೆಡ್‌ಲೈನ್ ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆ ಮುಸ್ಲಿಮರೇ ಮಸೀದಿಯನ್ನು ಕೆಡವಿದ್ದಾರೆ.
Sambhal, Uttar Pradesh: Demolition of a mosque began in Raya Buzurg village after the mosque committee missed the four-day deadline set by authorities. Bulldozers were used following a failed court petition. Complete demolition may take six days to a month. pic.twitter.com/hkdIUvjra5
— IANS (@ians_india) October 5, 2025
ಗೌಸುಲ್ಬರಾ ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಮಸೀದಿ ಸಮಿತಿಯ ಸದಸ್ಯರು ನಾವೇ ಈ ಮಸೀದಿಯನ್ನು ಕೆಡವುತ್ತೇವೆ. 4 ದಿನಗಳ ಸಮಯ ನೀಡಿ ಎಂದು ವಿನಂತಿಸಿದ್ದರು. ಇದನ್ನೂ ಓದಿ: ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಕಲ್ಲು ತೂರಾಟ – ಇಂಟರ್ನೆಟ್ ಸ್ಥಗಿತ, 36 ಗಂಟೆಗಳ ಕಾಲ ಕರ್ಫ್ಯೂ