– ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ಮುಂದುವರೆಸಲು ಸಿಎಂ ಸಮ್ಮುಖದಲ್ಲಿ ನಿರ್ಣಯ
– ಸಿದ್ದರಾಮಯ್ಯ ಹಣೆಗೆ ವಿಭೂತಿ ಹಚ್ಚಿ ಶರಣರಿಂದ ಸನ್ಮಾನ
ಬೆಂಗಳೂರು: ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಯುತ್ತಿರುವಾಗಲೇ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಮತ್ತೆ ಕೂಗೆದ್ದಿದೆ. ಬೆಂಗಳೂರಿನಲ್ಲಿ ಇಂದು ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ 300ಕ್ಕೂ ಹೆಚ್ಚು ಬಸವಾದಿ ಶರಣರು, ಲಿಂಗಾಯತ ಪ್ರಮುಖ ಸಂಘಟನೆ, ಒಕ್ಕೂಟಗಳು ಈ ಒತ್ತಾಯ ಮಾಡಿವೆ.
ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇನೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ “ಬಸವ ಮೆಟ್ರೋ” ಎಂದು ಘೋಷಿಸಿ ಬಿಡುತ್ತಿದ್ದೆ.
ನಮ್ಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು ನಾವು. ಶೂದ್ರರು ಜಾತಿ… pic.twitter.com/k5yUD34UaA
— Siddaramaiah (@siddaramaiah) October 5, 2025
ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ ಪಾಟೀಲ್ ಮತ್ತಿತರರು ಭಾಗವಹಿಸಿದ್ರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನಿವೃತ್ತ ನ್ಯಾ.ನಾಗಮೋಹನ ದಾಸ್, 2017 ರಲ್ಲಿ ತಾವು ಕೊಟ್ಟಿದ್ದ ವರದಿಯಾಧರಿಸಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕೋರಿ ಕೇಂದ್ರಕ್ಕೆ ಶಿಫಾರಸು ಕಳಿಸಿದ್ರು. ಆ ಶಿಫಾರಸು ವಾಪಸ್ ಬಂದಿದೆ. ಮತ್ತೆ ರಾಜ್ಯ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಸ್ಥಾನಮಾನ ಕೋರಿ ಶಿಫಾರಸು ಕಳಿಸಬೇಕು ಅಂದು ಆಗ್ರಹಿಸಿದ್ರು. ಇದನ್ನೂ ಓದಿ: ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ
ಇದೇ ವೇಳೆ ಹಲವು ಒತ್ತಾಯಗಳನ್ನು ಸಿಎಂಗೆ ಬಸವಾದಿ ಶರಣು ಮಾಡಿದ್ರು. ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತಾಡಿ, ನಮ್ಮ ಮೆಟ್ರೋಗೆ ಬಸವ ಮೆಟ್ರೋ ಎಂದು ಹೆಸರಿಡಬೇಕು. ಕಲಬುರಗಿ ವಿವಿಗೆ ಬಸವಣ್ಣನ ಹೆಸರಿಡಬೇಕು ಎಂದು ಆಗ್ರಹಿಸಿದ್ರು. ಇನ್ನೂ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ವಚನ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಒತ್ತಾಯಿಸಿದರು.
ಸಚಿವ ಎಂ.ಬಿ ಪಾಟೀಲ್ ಮಾತಾಡಿ, ತಾವು ಭೌಗೋಳಿಕವಾಗಿ ಹಿಂದೂಗಳಾದರೆ, ಧರ್ಮದಲ್ಲಿ ಲಿಂಗಾಯತ ಧರ್ಮ ಅಂದ್ರು. ಇದೇ ವೇಳೆ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ಮುಂದುವರೆಸುವುದು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ, ಸವಲತ್ತು ಪಡೆಯುವುದು, ಲಿಂಗಾಯತ ಕನ್ನಡ ಧರ್ಮ, ಲಿಂಗಾಯತ ಉಪಪಂಗಡ, ಉಪಜಾತಿಗಳ ನಡುವೆ ವೈವಾಹಿಕ ಸಂಬಂಧ ಬೆಳೆಸುವುದು, ಶರಣ ಸಂಸ್ಕೃತಿ ಪಾಲನೆ ಹೀಗೆ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಇದನ್ನೂ ಓದಿ: ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ’ ಪ್ರದರ್ಶನ – ರಿಷಬ್ ಚಿತ್ರತಂಡದ ಜೊತೆ ದ್ರೌಪದಿ ಮುರ್ಮು ಸಿನಿಮಾ ವೀಕ್ಷಣೆ
ಇದೇ ವೇಳೆ ಸಿಎಂಗೆ ಶರಣರು ಹಣೆಗೆ ವಿಭೂತಿ ಹಚ್ಚಿ ಸನ್ಮಾನ ಮಾಡಿದ್ರು. ಇನ್ನು ಭಾಷಣ ಮಾಡಿದ ಸಿಎಂ, ತಾವು ಬಸವಣ್ಣನ ಅಭಿಮಾನಿ, ಬಸವ ಅನುಯಾಯಿ. ಬಸವಣ್ಣನ ಹಾದಿಯಲ್ಲೇ ಸರ್ಕಾರ ನಡೀತಿದೆ, ಸಮಾನತೆ ತರಲು ಅನೇಕ ಭಾಗ್ಯಗಳನ್ನು ಸರ್ಕಾರ ಕೊಟ್ಟಿದೆ ಅಂದ್ರು. ಜಾಸ್ತಿ ಮಾತಾಡಿದ್ರೆ ವಿವಾದ ಆಗುತ್ತೆ ಅಂತನೇ ಮಾತಾಡಿದ ಸಿಎಂ, ನಮ್ಮ ಸಮಾಜ ಜಡತ್ವದಿಂದ, ಜಾತಿ ವ್ಯವಸ್ಥೆಗಳಿಂದ ಕೂಡಿದೆ ಅಂತನೇ ಬಸವಣ್ಣ ಹೊಸ ಧರ್ಮ ಸ್ಥಾಪಿಸಿದ್ರು. ಮುಂದಿನ ವರ್ಷದೊಳಗೆ ಅನುಭವ ಮಂಟಪ ನಿರ್ಮಾಣ ಪೂರ್ತಿಗೊಳಿಸುವ ಹಾಗೂ ವಚನ ವಿವಿ ಸ್ಥಾಪಿಸುವ ಭರವಸೆ ಕೊಟ್ರು. ಇನ್ನು ನಮ್ಮ ಮೆಟ್ರೋಗೆ ಬಸವಣ್ಣ ಹೆಸರಿಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಕಳಿಸೋದಾಗಿ ಹೇಳಿದ್ರು. ಇದನ್ನೂ ಓದಿ: ಕೇರಳದಲ್ಲಿ ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ