ವಿಶ್ವದಾದ್ಯಂತ ಅ.2 ರಂದು ತೆರೆ ಕಂಡ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾಗೆ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ. ರಿಷಬ್ ಶೆಟ್ಟಿ (Rishab Shetty) ಅಭಿನಯಿಸಿ, ನಿರ್ದೇಶಿಸಿರುವ ಚಿತ್ರಕ್ಕೆ ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿತಾರೆಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಸಹ ರಿಷಬ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ.
ಹೌದು, ಕಾಂತಾರ ಚಾಪ್ಟರ್-1 ಸಿನಿಮಾ ಬಿಡುಗಡೆಯ ಬಳಿಕ ನಟ ಯಶ್, ರಾಧಿಕಾ ಪಂಡಿತ್, ಪ್ರಭಾಸ್ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆಯ ಸುರಿಮಳೆಗಳನ್ನೇ ಹರಿಸಿದ್ದರು. ರಾಮ್ ಗೋಪಾಲ್ ವರ್ಮಾ ಅವರು ಕಾಂತಾರ ಸಿನಿಮಾ ತಂಡ ಹಾಗೂ ರಿಷಬ್ ನಿರ್ದೇಶನವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್ ಸಿಂಹ
KANTAAAARRRAAA is FANTAAAASTICCCC .. All FILM MAKERS in INDIA should feel ASHAMED after seeing the UNIMAGINABLE EFFORT @Shetty_Rishab and his team put in the BGM, SOUND DESIGN, CINEMATOGRAPHY , PRODUCTION DESIGN and VFX ..Forgetting the CONTENT which is a BONUS , their EFFORT…
— Ram Gopal Varma (@RGVzoomin) October 3, 2025
ಕಾಂತಾರ ಚಾಪ್ಟರ್-1 ಚಿತ್ರದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಕಾಂತಾರ ಒಂದು ಅದ್ಭುತ. ಭಾರತದ ಎಲ್ಲಾ ಸಿನಿಮಾ ನಿರ್ಮಾಪಕರು ಈ ಪ್ರಯತ್ನವನ್ನು ನೋಡಿ ನಾಚಿಕೆಪಡಬೇಕು. ರಿಷಬ್ ಶೆಟ್ಟಿ ಮತ್ತು ಅವರ ತಂಡ ಬಿಜಿಎಂ, ಧ್ವನಿ ವಿನ್ಯಾಸ, ಸಿನಿಮಾಟೋಗ್ರಫಿ, ಪ್ರೊಡಕ್ಷನ್ ಡಿಸೈನ್ ಮತ್ತು ವಿಎಫ್‌ಎಕ್ಸ್ ಅನ್ನು ಉತ್ತಮವಾಗಿ ಬಳಸಿಕೊಂಡಿದೆ. ಕೆಲವೊಂದು ವಿಚಾರಗಳನ್ನು ಹೊರತುಪಡಿಸಿ, ಸಿನಿಮಾ ತಂಡದ ಈ ಪ್ರಯತ್ನಗಳಿಂದ ಕಾಂತಾರ ಚಾಪ್ಟರ್-1 ಬ್ಲಾಕ್‌ಬಸ್ಟರ್ ಸಿನಿಮಾ ಆಗಲು ಅರ್ಹವಾಗಿದೆ. ಈ ಕ್ರಿಯೇಟಿವ್ ಟೀಂ ಅನ್ನು ಕಟ್ಟಿ, ಬೆಂಬಲಿಸಿದ್ದಕ್ಕೆ ಹೊಂಬಾಳೆ ಫಿಲ್ಮ್÷್ಸಗೆ ಹ್ಯಾಂಡ್ಸ್ ಆಫ್ ಎಂದಿದ್ದಾರೆ.
ರಿಷಬ್ ಶೆಟ್ಟಿ ನೀವು ಶ್ರೇಷ್ಠ ನಿರ್ದೇಶಕನೋ ಅಥವಾ ಶ್ರೇಷ್ಠ ನಟರೋ ಎಂದು ನಿರ್ಧರಿಸಲು ನನಗೆ ಸಾಧ್ಯವಿಲ್ಲ ಎಂದು ಕೊಂಡಾಡಿದ್ದಾರೆ.