– ಡಿಕೆಶಿ ಹೆಸರು ಹೇಳದೇ ಕಿಡಿಕಾರಿದ ಹೆಚ್‌ಡಿ ದೇವೇಗೌಡ
ಬೆಂಗಳೂರು: ದೇವೇಗೌಡ, ಕುಮಾರಸ್ವಾಮಿ ಫ್ಯಾಮಿಲಿ ನನ್ನನ್ನು ಜೈಲಿಗೆ ಹಾಕೋಕೆ ಕಾಯ್ತಿದ್ದಾರೆ ಎಂಬ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಆರೋಪಕ್ಕೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಹೆಸರು ಹೇಳದೇ ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಯಮಾಡಿ ಬೇರೊಬ್ಬರ ಹೆಸರು ತೆಗೆದು ಚರ್ಚೆ ಮಾಡೋದು ಬೇಡ. ನಾನು ಆ ವಿಷಯದಲ್ಲಿ ಮಾತಾಡುವುದಿಲ್ಲ. 3 ತಿಂಗಳು ನಮ್ಮ ಮನೆ ಮುಂದೆ ಮಾಧ್ಯಮಗಳು ಹಗಲು ರಾತ್ರಿ ಇದ್ದವು. ಯಾರ ಪ್ರೇರಣೆಯಿಂದ ಇದೆಲ್ಲ ಆಯ್ತು. ನಾನು ಆಪಾದನೆ ಮಾಡಲ್ಲ. ಆವತ್ತು ನಾನು ಮಾತಾಡಿಲ್ಲ. ಇವತ್ತು ಮಾತಾಡಲ್ಲ. ಆ ದಿನಗಳನ್ನು ನೀವೇ ನೋಡಿದ್ದೀರಿ. ಅದರ ಹಿಂದೆ ಯಾವ ಶಕ್ತಿ ಇತ್ತು ಅಂತ ನಿಮಗೆ ಗೊತ್ತಿದೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಆರೋಪ ಮಾಡಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಬಿಜೆಪಿ-ಜೆಡಿಎಸ್ ಮೈತ್ರಿ: ಹೆಚ್‌ಡಿಡಿ ಘೋಷಣೆ
ಯಾರು ಏನೇ ಮಾತಾಡಿದ್ರು ನಾವು ಸಣ್ಣ ರಾಜಕೀಯ ಪಕ್ಷದವರು. ಅದನ್ನ ಉಳಿಸಿಕೊಳ್ಳೋಕೆ ಶಕ್ತಿ ಮೀರಿ ಕೆಲಸ ಮಾಡ್ತೀವಿ. ಡಿಕೆಶಿವಕುಮಾರ್ ಬಗ್ಗೆ ನಾನು ಮಾತಾಡಲ್ಲ. 20 ವರ್ಷದ ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾಗಿನಿಂದ ನಾನು ಮಾತಾಡಿಲ್ಲ ಎಂದು ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್‌ಶಿಪ್ ಮಾಡೋಕೆ ಡಿಕೆಶಿವಕುಮಾರ್ ಮುಂದಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿಯಲ್ಲಿ ನಮ್ಮ ಪಕ್ಷದವರು ಇದರ ವಿರುದ್ಧ ಪ್ರತಿಭಟನೆ ಮಾಡಿದರು. ನಾನು ನೋಡಿದೆ. ಈಗ ಅವರ ಸರ್ಕಾರ ಇದೆ. ಅವರು ಏನೇ ಹೇಳಿದರೂ ತಿರಸ್ಕಾರ ಮನೋಭಾವದಿಂದ ನೋಡಿ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು. ಅಲ್ಲಿವರೆಗೂ ನೀವು ಕಾಯಬೇಕು.ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್