ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹುಟ್ಟುಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವರಾತ್ರಿ ವೇಳೆ ಮೂಗುಬೊಟ್ಟು ಚುಚ್ಚಿಸಿಕೊಂಡಿದ್ದ ರಚಿತಾ ತೆರೆಮರೆಯಲ್ಲಿ ಮದುವೆಗೆ ಸಿದ್ಧರಾಗ್ತಿದ್ದಾರಾ ಅನ್ನೋ ಅನುಮಾನಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಶೀಘ್ರದಲ್ಲೇ ಮದುವೆಯಾಗುವ (Marriage) ಬಗ್ಗೆ ನಟಿ ರಚಿತಾ ರಾಮ್ ಮಾತ್ನಾಡಿದ್ದಾರೆ. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಪೇಂಟಿಂಗ್ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!
33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್
ನಟಿ ರಚಿತಾ ರಾಮ್ ಈ ಹಿಂದೆಯೂ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಗೌಡ್ರ ಹುಡುಗ ಸಿಕ್ರೆ ಮದುವೆಯಾಗ್ತೀನಿ ಎಂದು ಹೇಳಿದ್ದರು. ಪ್ರತಿಬಾರಿಯೂ ಮದುವೆಯ ಪ್ರಸ್ತಾಪ ಬಂದಾಗಲೆಲ್ಲ ರಚಿತಾ, ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗ್ತಿದ್ರು. ಈ ಸಲ ಶೀಘ್ರವೇ ಮದ್ವೆ ಆಗ್ತೀನಿ ಎಂದು ಹೇಳಿರುವ ಹಿಂದೆ ಅವರ ಕುಟುಂಬಸ್ಥರು ಹುಡುಗನ ಹುಡುಕುವ ಕೆಲಸ ನಡೆಸಿದ್ದಾರೆ ಅಂತಾನೇ ಹೇಳ್ಬಹುದು. ಬಹುತೇಕ 2026ರಲ್ಲಿ ರಚಿತಾ ಮದುವೆಯ ಸುಳಿವು ನೀಡಿದ್ದಾರೆ. ರಚಿತಾ ಫ್ಯಾನ್ಸ್ ಈ ಸುದ್ದಿ ಕೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.