ಚಿತ್ರದುರ್ಗ: ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನಾದ್ಯಂತ ಮಳೆ (Rain) ಕಣ್ಣಾ ಮುಚ್ಚಾಲೆಯಾಡಿದ ಪರಿಣಾಮ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆ (Groundnut Crop) ಸಂಪೂರ್ಣ ಒಣಗಿದೆ. ಹೀಗಾಗಿ ಸಾಲಸೂಲ ಮಾಡಿ ಬಂಡವಾಳ ಹೂಡಿದ್ದ ರೈತರು ಕಂಗಾಲಾಗಿದ್ದಾರೆ.
ಈ ಬಾರಿ ಬಿತ್ತನೆ ವೇಳೆ ಸಕಾಲಕ್ಕೆ ಮಳೆಯಾದ ಪರಿಣಾಮ ಸಾಲ ಸೂಲ ಮಾಡಿ ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದ್ದ ರೈತನಿಗೆ (Farmers) ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗುತ್ತಿದ್ದು, ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಬೆಳೆ ಒಣಗುತ್ತಿರುವುದು ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ಚೆನ್ನೈ ಕಸ್ಟಮ್ಸ್ ಭಾರೀ ಲಂಚ- ಭಾರತದ ಕಾರ್ಯಾಚರಣೆ ನಿಲ್ಲಿಸುತ್ತೇವೆ ಎಂದ ಲಾಜಿಸ್ಟಿಕ್ಸ್ ಕಂಪನಿ
ಕೈಗೆ ಬಂದ ಬೆಳೆ ಸಂಪೂರ್ಣ ಕಮರಿ ಹೋಗುತ್ತಿದ್ದು, ಈ ಬಾರಿಯೂ ರೈತನ ಬೆಳೆ ಕೈಗೆ ಸಿಗದೆ ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ. ಭೂಮಿಗೆ ಹಾಕಿದ ಬಂಡವಾಳವು ಕೈಗೆ ಸಿಗದೇ ಖಾಲಿ ಚೀಲವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದಿಂದ ಬೆಳೆ ವಿಮೆ ಅಥವಾ ಬೆಳೆ ಹಾನಿ ಪರಿಹಾರವಾದರೂ ಸಿಗುತ್ತಾ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ – ಕೊಲಂಬಿಯಾದಲ್ಲಿ ರಾಹುಲ್ ವಾಗ್ದಾಳಿ