ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ್‌ಬಾಬು ಪುತ್ರ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ದಂಪತಿಗೆ ಗಂಡು ಮಗು ಜನಿಸಿತ್ತು. ಇದೀಗ ಮಗುವಿಗೆ ವಾಯು ಎಂದು ಹೆಸರಿಡಲಾಗಿದೆ. ಈ ವಿಚಾರವನ್ನು ಅಧಿಕೃತವಾಗಿ ಇನ್ಸ್ಟಾಗ್ರಾಂ ಮೂಲಕ ವರುಣ್ ತೇಜ್ ಘೋಷಣೆ ಮಾಡಿದ್ದಾರೆ. ವಾಯುತೇಜ್ ಕೋನಿಡೇಲಾ ಎಂದು ಮಗುವಿಗೆ ನಾಮಕರಣ ಮಾಡಲಾಗಿದೆ. ಭವಿಷ್ಯದ ಸ್ಟಾರ್‌ಗೆ ಕೋನಿಡೇಲ ಕುಟುಂಬದ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
ಚಿರಂಜೀವಿ ಕುಟುಂಬದಲ್ಲಿ ಹುಟ್ಟುವ ಗಂಡು ಮಕ್ಕಳೆಲ್ಲರೂ ಸ್ಟಾರ್‌ಗಳೇ ಎಂಬ ಮಾತಿದೆ. ಅದರಂತೆ ಇಡೀ ಕುಟುಂಬವೇ ಸೂಪರ್ ಸ್ಟಾರ್‌ಗಳನ್ನ ಹೊಂದಿದೆ. ಹೀಗಾಗಿ ಮುಂದಿನ ಜನರೇಶನ್‌ಗೆ ಹೀರೋ ಆಗಿ ಮುಂದುವರೆಯಲು ವಾಯು ಎಂಟ್ರಿಯಾಗಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ ನೆಟ್ಟಿಗರು.
ಇದೀಗ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ದಂಪತಿ ತಮ್ಮ ಪುಟಾಣಿ ಪುತ್ರನ ಮೊದಲ ಫೋಟೋವನ್ನೂ ಹಂಚಿಕೊಂಡು ಹೆಸರನ್ನೂ ಪರಿಚಯಿಸಿದ್ದಾರೆ. ನಾಮಕರಣದ ಕೆಲ ಫೋಟೋಗಳನ್ನ ಹಂಚಿಕೊಂಡಿದ್ದಾರೆ.