ಹಾಸನ: ಸಾಲು ಸಾಲು ರಜೆ ಹಿನ್ನೆಲೆ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಸಂಖ್ಯೆಯಲ್ಲಿ ಜನ ತೆರಳುತ್ತಿದ್ದಾರೆ. ಪರಿಣಾಮ ಸಕಲೇಶಪುರ (Sakaleshapura) ಶಿರಾಡಿಘಾಟ್ (Shiradi Ghat) ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
ಸಾವಿರಾರರು ವಾಹನಗಳಲ್ಲಿ ಬೆಂಗಳೂರಿನಿಂದ ಮಂಗಳೂರು, ಮಂಗಳೂರು ಕಡೆಯಿಂದ ಬೆಂಗಳೂರಿಗೆ ಜನ ತೆರಳುತ್ತಿದ್ದಾರೆ. ಇದರಿಂದ ಸುಮಾರು ಅರ್ಧ ಗಂಟೆಯಿಂದ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿವೆ. ಟ್ರಾಫಿಕ್ ಜಾಮ್‌ನಿಂದ ಪ್ರವಾಸಿಗರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಇದನ್ನೂ ಓದಿ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು
ದಸರಾ ಪ್ರಯುಕ್ತ ಸಾಲು ಸಾಲು ರಜೆಯಿಂದಾಗಿ ಪ್ರವಾಸಿಗರು ಪ್ರವಾಸಿ ತಾಣಗಳುಗೆ ತೆರಳುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಕೆಲಸ ಮಾಡುವವರು ಸ್ವಂತ ಊರಿಗೆ ತೆರಳುತ್ತಿದ್ದಾರೆ. ಇದರ ನಡುವೆ ಕೆಲವರು ಊರಿಂದ ವಾಪಸ್ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿದೆ.
ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಸಕಲೇಶಪುರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್ ಬರಗಾಪಿಗೆ ಮನಸೋತ ಪ್ರವಾಸಿಗರು!