ಮುಂಬೈ: ಪಹಲ್ಗಾಮ್ ದಾಳಿ (Pahalgam Attack) ನಂತರ ಭಾರತದ ನಿಜವಾದ ಸ್ನೇಹಿತ ಯಾರೆಂಬುದು ಗೊತ್ತಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಆರ್‌ಎಸ್‌ಎಸ್ (RSS) ವಾರ್ಷಿಕ ವಿಜಯದಶಮಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತ್ರೆ ಬಂದಾಗ ಭಾರತವು ಹೆಚ್ಚು ಜಾಗರೂಕವಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಾವು ಸ್ವದೇಶಿ & ಸ್ವಾವಲಂಬನೆಯತ್ತ ಸಾಗಬೇಕು: ಅಮೆರಿಕ ಟ್ಯಾರಿಫ್ ಬಗ್ಗೆ ಮೋಹನ್ ಭಾಗವತ್ ಮಾತು
ನಾವು ಇತರ ದೇಶಗಳೊಂದಿಗೆ ಸ್ನೇಹಪರ ಸಂಬಂಧವನ್ನು ಕಾಪಾಡಿಕೊಂಡಿದ್ದರೂ, ನಾವು ಅದನ್ನು ಮುಂದುವರಿಸುತ್ತೇವೆ, ನಮ್ಮ ಭದ್ರತೆಗೆ ಬಂದಾಗ, ನಾವು ಹೆಚ್ಚು ಜಾಗರೂಕರಾಗಿರಬೇಕು. ಪಹಲ್ಗಮ್ ದಾಳಿಯ ನಂತರ, ವಿವಿಧ ದೇಶಗಳು ತೆಗೆದುಕೊಂಡ ನಿರ್ಣಯಗಳಿಂದ ಭಾರತದ ನಿಜವಾದ ಸ್ನೇಹಿತ ಯಾರೆಂಬುದು ಗೊತ್ತಾ ಗಿದೆ ಎಂದು ತಿಳಿಸಿದ್ದಾರೆ.
ಭಯೋತ್ಪಾದಕರು ಗಡಿ ದಾಟಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಭಾರತೀಯರನ್ನು ಹತ್ಯೆ ಮಾಡಿದರು. ಇದು ದೇಶದಲ್ಲಿ ಅಪಾರ ನೋವು ಮತ್ತು ಉಗ್ರರ ವಿರುದ್ಧ ಕೋಪಕ್ಕೆ ಕಾರಣವಾಯಿತು. ದಾಳಿಗೆ ತಕ್ಕ ಪ್ರತೀಕಾರವೂ ಆಯಿತು. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮಾಜದ ಏಕತೆ ಇದರಿಂದ ಸ್ಪಷ್ಟವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ದುಷ್ಟ, ಕೆಡುಕಿನ ಮೇಲೆ ಒಳ್ಳೆಯದರ ವಿಜಯ: ಭಾರತೀಯರಿಗೆ ವಿಜಯದಶಮಿ ಶುಭಾಶಯ ತಿಳಿಸಿದ ಮೋದಿ
ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ದೇಶಗಳಲ್ಲಿ ಸಾರ್ವಜನಿಕರು ದಂಗೆಯೆದ್ದು ಹಿಂಸಾತ್ಮಕ ಘಟನೆಗಳು ನಡೆದಿವೆ. ಭಾರತದಲ್ಲೂ ಇಂತಹ ಪರಿಸ್ಥಿತಿ ಸೃಷ್ಟಿಸಲು ಬಯಸುವವರು ದೇಶದ ಒಳಗೂ ಮತ್ತು ಹೊರಗೂ ಸಕ್ರಿಯರಾಗಿದ್ದಾರೆ. ಹಿಂಸಾತ್ಮಕ ದಂಗೆ ಅರಾಜಕತೆಗೆ ಮಾತ್ರ ಕಾರಣವಾಗುತ್ತವೆ. ವಿದೇಶಗಳ ಮಧ್ಯಪ್ರವೇಶಕ್ಕೆ ಅವಕಾಶ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಎಸ್ ಜಾರಿಗೆ ತಂದ ಸುಂಕ ನೀತಿಯನ್ನು ಸ್ವಂತ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ನಾವು ಸ್ವದೇಶಿ ಮತ್ತು ಸ್ವಾವಲಂಬನೆಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ.