– ರಿಷಬ್ ನಿರ್ದೇಶನ, ಅಭಿನಯಕ್ಕೆ ಪ್ರೇಕ್ಷಕರು ಫಿದಾ; ಶಿಳ್ಳೆ, ಚಪ್ಪಾಳೆಯ ಮೆಚ್ಚುಗೆ
ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವು ಅದ್ದೂರಿಯಾಗಿ ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾ ಮೂಡಿಬಂದ ರೀತಿ ಹಾಗೂ ಅದಕ್ಕೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಬಾರಿ ಮೆಚ್ಚುಗೆ ಕಂಡು ರಿಷಬ್ ಶೆಟ್ಟಿ ಪತ್ನಿ ಭಾವುಕರಾದರು.
ಸಿನಿಮಾ ಪ್ರದರ್ಶನದ ಸಮಯದಲ್ಲಿ ರಿಷಬ್ ಶೆಟ್ಟಿ ಅವರ ಪತ್ನಿ, ನಟ-ವಿನ್ಯಾಸಕಿ ಪ್ರಗತಿ ಶೆಟ್ಟಿ (Pragathi Shetty), ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿ ಕಣ್ಣೀರು ಹಾಕಿದರು. ಆಗ ಪತ್ನಿಯನ್ನು ಅಪ್ಪಿಕೊಂಡು ರಿಷಬ್ ಸಮಾಧಾನಪಡಿಸಿದ ದೃಶ್ಯ ಕಂಡುಬಂತು. ನಿಜಕ್ಕೂ ಇದು ಹೃದಯಸ್ಪರ್ಶಿ ಕ್ಷಣವಾಗಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ವಿಶ್ವದಾದ್ಯಂತ ಇಂದು ರಿಲೀಸ್
ವಿಜಯದಶಮಿ ದಿನವೇ ವಿಶ್ವದಾದ್ಯಂತ ಕಾಂತಾರ ಚಾಪ್ಟರ್ 1 ಸಿನಿಮಾ ರಿಲೀಸ್ ಆಗಿದೆ. ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ.
ರಿಷಬ್, ತನ್ನ ಪತ್ನಿಯೊಂದಿಗೆ ಕಾಂತಾರ ಚಾಪ್ಟರ್ 1 ರ ಪ್ರದರ್ಶನಕ್ಕೆ ಹಾಜರಾಗಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಒಂದು ವೀಡಿಯೊದಲ್ಲಿ ರಿಷಬ್ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಿರುವ ಭಾವನಾತ್ಮಕ ಕ್ಷಣಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್ ಶೆಟ್ಟಿ
ರಿಷಬ್ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರೇಕ್ಷಕರು ಅವರೆಲ್ಲರಿಗೂ ಹರ್ಷೋದ್ಗಾರದ ಮೂಲಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ರಿಷಬ್ ಜೊತೆಗೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.