-ಚಾಮುಂಡಿಬೆಟ್ಟದಿಂದ ಅರಮನೆಯತ್ತ ಉತ್ಸವಮೂರ್ತಿ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ದಸರಾ ವೈಭವ ಜೋರಾಗಿದ್ದು, ವಿಶ್ವವಿಖ್ಯಾತ ಜಂಬೂಸವಾರಿಗೆ (Jambu Savari) ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿಯಲ್ಲಿ ಸಾಗುವ ತಾಯಿ ಚಾಮುಂಡೇಶ್ವರಿ ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ.
ಚಿನ್ನದ ಅಂಬಾರಿಯಲ್ಲಿ ಸಾಗಲಿರುವ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಅಲಂಕಾರ ಮಾಡಿ, ಪೂಜೆ ಮಾಡಲಾಗಿದೆ. ಬಳಿಕ ಉತ್ಸವ ಮೂರ್ತಿ ಚಾಮುಂಡಿ ಬೆಟ್ಟದಿಂದ ಅರಮನೆಯತ್ತ ತೆರೆದ ವಾಹನದಲ್ಲಿ ಮೆರವೆಣಿಗೆ ಸಾಗಲಿದೆ. ನಾಡದೇವಿ ಬೆಳ್ಳಿ ಪ್ರಭಾವಳಿಯಲ್ಲಿ ವಿರಾಜಮಾನಳಾಗಿ ಕಾಣಿಸಿಕೊಂಡಿದ್ದಾಳೆ.ಇದನ್ನೂ ಓದಿ: ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ
ತಾಯಿ ಚಾಮುಂಡೇಶ್ವರಿ ಸರ್ವಾಲಂಕೃತಗೊಂಡಿದ್ದು, ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಅಂಬಾರಿಯಲ್ಲಿ ಸಾಗುವ ತಾಯಿ ಚಾಮುಂಡಿ ಉತ್ಸವಮೂರ್ತಿ ದರ್ಶನ ನೀಡುತ್ತಿದ್ದಂತೆ ಭಕ್ತರು ಹರ್ಷೋದ್ಘಾರ ವ್ಯಕ್ತಪಡಿಸಿದ್ದು, ತಾಯಿ ಚಾಮುಂಡಮ್ಮಕ್ಕೀ ಜೈ ಎಂದು ಜಯಘೋಷ ಕೂಗಿದ್ದಾರೆ.