– ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಭಾಗಿ
ಬೆಂಗಳೂರು: ಸುದ್ದಿ ವಾಹಿನಿ ‘ಪಬ್ಲಿಕ್ ಟಿವಿ’ (Public TV) ಕಚೇರಿಯಲ್ಲಿ ಆಯುಧ ಪೂಜೆ (Ayudha Pooja) ಸಂಭ್ರಮ ಮನೆ ಮಾಡಿತ್ತು. ಕಚೇರಿಯಲ್ಲಿ ಪೂಜಾ ಕಾರ್ಯ ನೆರವೇರಿಸಲಾಯಿತು.
ಪಬ್ಲಿಕ್ ಟಿವಿಯ ಕ್ಯಾಮೆರಾ, ಟ್ರೈಪಾಡ್, ಲೈಟ್ಸ್, ಮೈಕ್‌ಗೆ ಪೂಜೆ ಸಲ್ಲಿಸಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಹರೀಶ್ ಕುಮಾರ್ ಹಾಗೂ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ
ಬಳಿಕ ಕಚೇರಿಯ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬೂದಗುಂಬಲ ದೃಷ್ಟಿ ತೆಗೆದು ಹೊಡೆಯಲಾಯಿತು. ಪೂಜೆ ಬಳಿಕ ಸಿಬ್ಬಂದಿ ಪ್ರಸಾದ ಸ್ವೀಕರಿಸಿದರು.
ಶ್ರೀಧರ ಭಟ್ಟಾಚಾರ್ಯ ಗುರೂಜಿ ಅವರು ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಹಬ್ಬದ ವಿಶೇಷವಾಗಿ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿಗೆ ಸ್ವೀಟ್ ಬಾಕ್ಸ್ ವಿತರಿಸಲಾಯಿತು. ಇದನ್ನೂ ಓದಿ: ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್