– ಸರ್ಕಾರಕ್ಕೆ ತಜ್ಞರ ಸಮಿತಿಯಿಂದ ಪ್ರಸ್ತಾಪ
ಬೆಂಗಳೂರು: ಸಂಚಾರ ದಟ್ಟಣೆ (Heavy Traffic) ಇರುವ ಬೆಂಗಳೂರಿನ (Bengaluru) ಕೆಲ ರೋಡ್ ಗಳಲ್ಲಿ ನೀವು ಸಿಂಗಲ್ ಆಗಿ ಕಾರ್ ಓಡಿಸ್ತೀರಾ ಹಾಗಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಒಂದು ವೇಳೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡರೆ ದೇಶದಲ್ಲಿ ಎಲ್ಲಿಯೂ ಇಲ್ಲದಸಂಚಾರ ದಟ್ಟಣೆ ತೆರಿಗೆ (Congestion Tax) ಪಾವತಿಸಬೇಕಾಗುತ್ತದೆ.
ಹೌದು. ಸೆಪ್ಟೆಂಬರ್ 24 ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಬಗ್ಗೆ ವಿವಿಧ ಇಲಾಖೆಗಳ ಕೋ ಆರ್ಡಿನೇಶನ್ ಮತ್ತು ಕೆಲ ಉದ್ಯಮಿಗಳ ಮಹತ್ವದ ಸಭೆ ನಡೆದಿದೆ. ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ತಜ್ಞರು ಸಂಚಾರ ದಟ್ಟಣೆ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಫಾಸ್ಟ್ ಟ್ಯಾಗ್ ಸಿಸ್ಟಮ್ ಮೂಲಕ ಸಂಚಾರ ದಟ್ಟಣೆ ಇರುವ ನಿರ್ದಿಷ್ಟ ರಸ್ತೆಗಳಲ್ಲಿ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ ಕಾರ್ ಪೂಲಿಂಗ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಡೆದ ತಜ್ಞರ ಸಮಿತಿ ಈ ಪ್ರಸ್ತಾಪಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಸಂಚಾರ ದಟ್ಟಣೆ ಟ್ಯಾಕ್ಸ್ ಹಾಕಿರೆ ಸಾರ್ವಜನಿಕವಾಗಿ ವ್ಯಾಪಕವಾಗಿ ಆಕ್ರೋಶ ಸಾಧ್ಯತೆ ಅರಿತು ಆ ಪ್ರಸ್ತಾಪ ರಿಜೆಕ್ಟ್ ಆಗಬಹುದು. ಹಾಗಾಗಿ ಸರ್ಕಾರ ಮಟ್ಟದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.
ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ನಗರಗಳಲ್ಲಿ ಸಂಚಾರಣ ದಟ್ಟಣೆ ಟ್ಯಾಕ್ಸ್ ಬಗ್ಗೆ ಉಲ್ಲೇಖಿಸಲಾಗಿದ್ದು, ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಅಲ್ಲಿಗೆ ಹೋಲಿಸಿ ಟ್ಯಾಕ್ಸ್ ಹಾಕುವ ಪ್ರಸ್ತಾಪಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಏನಿದು ಸಂಚಾರ ದಟ್ಟಣೆ ತೆರಿಗೆ?
ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ನಿರ್ದಿಷ್ಟ ರಸ್ತೆಗಳಲ್ಲಿ ಜಾರಿ. ಒಬ್ಬರೇ ಕಾರು ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ ಕಟ್ಟಬೇಕು. ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಟ್ಟಣೆ ತೆರಿಗೆ ಕಡಿತ ಮಾಡಲು ಪ್ರಸ್ತಾಪ ಇಡಲಾಗಿದೆ.