ಪಂಚಾಂಗ
ರಾಹುಕಾಲ: 12:13 ರಿಂದ 1:43
ಗುಳಿಕಕಾಲ: 10:43 ರಿಂದ 12:13
ಯಮಗಂಡಕಾಲ: 7:43 ರಿಂದ 9:13
ವಾರ: ಬುಧವಾರ, ತಿಥಿ: ನವಮಿ
ನಕ್ಷತ್ರ: ಪೂರ್ವಾಷಾಡ ಉಪರಿ ಉತ್ತರಾಷಾಡ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಸಮಾಧಾನದಿಂದ ವರ್ತಿಸಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಆರೋಗ್ಯದ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.
ವೃಷಭ: ಪರರಿಂದ ತೊಂದರೆ ಎಚ್ಚರ, ಕುಲದೇವರ ಆರಾಧನೆಯಿಂದ ವಿಘ್ನ ನಿವಾರಣೆ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
ಮಿಥುನ: ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವಿರಿ, ಹಿರಿಯರಿಗೆ ಗೌರವ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ.
ಕಟಕ: ವಿವೇಚನೆ ಕಳೆದುಕೊಳ್ಳಬೇಡಿ, ಮನಕ್ಲೇಶ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ.
ಸಿಂಹ: ಚಂಚಲ ಸ್ವಭಾವ, ವೈರಿಗಳಿಂದ ದೂರವಿರಿ, ಅಕಾಲ ಭೋಜನ, ಬಡ ರೋಗಿಗಳಿಗೆ ಸೇವೆ ಮಾಡಿ, ಇಷ್ಟಾರ್ಥಗಳು ಈಡೇರುತ್ತವೆ.
ಕನ್ಯಾ: ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಶತ್ರು ಬಾದೆ, ಮಕ್ಕಳ ಭಾವನೆಗೆ ಸ್ಪಂದಿಸಿ, ಸುಖ ಭೋಜನ.
ತುಲಾ: ಕುಟುಂಬ ಸೌಖ್ಯ, ಮಾತೃವಿನಿಂದ ಧನಪ್ರಾಪ್ತಿ, ಪರಸ್ಥಳವಾಸ, ತೀರ್ಥಕ್ಷೇತ್ರ ದರ್ಶನ, ಸುಖ ಭೋಜನ, ಸ್ತ್ರೀ ಲಾಭ.
ವೃಶ್ಚಿಕ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ನಿರೀಕ್ಷಿತ ಖರ್ಚು, ಮಿತ್ರರಲ್ಲಿ ದ್ವೇಷ, ಶರೀರದಲ್ಲಿ ಆಲಸ್ಯ, ಇಲ್ಲಸಲ್ಲದ ತಕರಾರು.
ಧನಸ್ಸು: ಸ್ತ್ರೀ ಲಾಭ, ಕೋಪ ಜಾಸ್ತಿ, ಅತಿಯಾದ ನಿದ್ರೆ, ಯತ್ನ ಕಾರ್ಯಾನುಕೂಲ, ಮಂಗಳ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಅನ್ಯೂನ್ಯತೆ.
ಮಕರ: ಅಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ವೇದನೆ, ವಿದೇಶ ಪ್ರಯಾಣ, ಸಾಲ ಮಾಡುವ ಸಾಧ್ಯತೆ.
ಕುಂಭ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ರಾಜ ವಿರೋಧ, ವಿವಾಹ ಯೋಗ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಲಾಭ.
ಮೀನ: ಅಧಿಕ ಧನವ್ಯಯ, ವಸ್ತ್ರಾಭರಣ ಖರೀದಿ, ವಾದ ವಿವಾದಗಳಿಂದ ದೂರವಿರಿ.